kharabu song
ಸುಮಾರು 2 ವರ್ಷಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಬಹು ನಿರೀಕ್ಷೆಯ ಕನ್ನಡದ ಸಿನಿಮಾ ಅಂದ್ರೆ ಅದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ… ಹೌದು ಈ ಚಿತ್ರ , ಸಿನಿಮಾದಲ್ಲಿನ ಧ್ರುವ ಮಾಸ್ ಲುಕ್, ಖರಾಬು ಹಾಡು ಇವೆಲ್ಲಾ ಈ ಸಿನಿಮಾದ ಹೈಲೈಟ್ಸ್.
ಈ ಸಿನಿಮಾದ ಖರಾಬು ಹಾಡಂತೂ ಸ್ಯಾಮಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಚಿತ್ರ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡುಗಳು ಹಾಗೂ ಡೈಲಾಗ್ ಗಳು ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಡ್ತಿದೆ.
ಅದರಲ್ಲೂ ಖರಾಬು ಹಾಡು ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಿದೆ. ಹೌದು ಯ್ಯೂಟ್ಯೂಬ್ನಲ್ಲಿ ಇದುವರೆಗೂ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡ ಮೊದಲು ಹಾಡು ಖರಾಬು. ದಾಖಲೆಗಳ ಪ್ರಕಾರ ಖರಾಬು ಹಾಡು ಯ್ಯೂಟ್ಯೂಬ್ನಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದ್ರೆ ಬರೋಬ್ಬರಿ 15 ಕೋಟಿ ಬಾರಿ ಈ ಹಾಡನ್ನು ವೀಕ್ಷಕರು ನೋಡಿದ್ದಾರೆ. 1.1 ಮಿಲಿಯನ್ ಲೈಕ್ಸ್ ಹಾಡಿಗೆ ಸಿಕ್ಕಿದೆ. 76670 ಕಾಮೆಂಟ್ ಪಡೆದುಕೊಂಡಿದೆ.
ಅಣ್ಣ ಖರಾಬು ಹಾಡಿನಲ್ಲಿ ಧ್ರುವ ಖರಾಬ್ ಲುಕ್, ಹಾಡಿನ ಸೆಟ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿರುವ ಮೊಟ್ಟ ಮೊದಲ ಹಾಡು ಕೂಡ ಇದಾಗಿದೆ. ಇನ್ನೂ ಇದಕ್ಕೂ ಮುಂಚೆ ಶರಣ್ ನಟಿಸಿದ್ದ ‘Rambo-2’ ಚಿತ್ರದ ‘ಚುಟು ಚುಟು’ ಹಾಡು ಅತಿ ಹೆಚ್ಚು ವೀಕ್ಷಣೆ ಕಂಡಿತ್ತು. ಇದೀಗ ಈ ಹಾಡಿನ ದಾಖಲೆ ಸರಿಗಟ್ಟಿದೆ ಖರಾಬು ಹಾಡು. ಅಂದ್ಹಾಗೆ, ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿದ್ದು, ಖುದ್ದು ಚಂದನ್ ಅವರೇ ಹಾಡಿದ್ದಾರೆ. ಇನ್ನೂ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಚಿತ್ರ ತೆರೆಗಪ್ಪಳಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಪೊಗರು ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೆ ನಾಯಕಿಯಾಗಿ ಪ್ರಸ್ತುತ ಟಾಲಿವುಡ್ ಹಾಗೂ ಕಾಲಿವುಡ್ ನ ಬಹುಬೇಡಿಕೆಯ ನಟಿಯಾಗಿರುವ “ಕಿರಿಕ್ ಪಾರ್ಟಿ” ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಪೊಗರು ಚಿತ್ರದ ನಂತರ ಧ್ರುವ ಸರ್ಜಾ ಅವರು ಮತ್ತೊಮ್ಮೆ ಅದ್ಧೂರಿ ನಿದೇರ್ಶಕರ ಜೊತೆಗೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.
ಇದರ ಹೊರತಾಗಿ ಅನೇಕ ಆಫರ್ ಗಳು ಅವರ ಕೈಯಲ್ಲಿದೆ. ಅಷ್ಟೇ ಅಲ್ಲ ಧ್ರುವ ಅವರು ಮತ್ತೊಮ್ಮ ನಂದ ಕಿಶೋರ್ ಅವರೊಂದಿಗೆ ಮತ್ತೊಂದು ಹೊಸ ಸಿನಿಮಾಗೂ ಈಗಾಗಲೇ ಸಹಿ ಮಾಡಿದ್ದು, ಸ್ರಿಪ್ಟ್ ಪೂಜೆ ಕೂಡ ನೆರವೇರಿದೆ. ಇತ್ತ ರಶ್ಮಿಕಾ ಸಹ ಟಾಲಿವುಡ್ ಕಾಲಿವುಡ್ ನಲ್ಲಿ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ನಂದ ಕಿಶೋರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಜಗದ್ಗುರು ಬ್ಯಾನರ್ಸ್ ನಡಿ ಮೂಡಿ ಬರುತ್ತಿರುವ ಚಿತ್ರಕ್ಕೆ ಬಿ. ಕೆ ಗಂಗಾಧರ್ ಅವರು ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿ ಧ್ರುವ ಸರ್ಜಾ , ರಶ್ಮಿಕಾ ಮಂದಣ್ಣ ನಾಯಕ ನಾಯಕಿಯರಾಗಿ ಮಿಂಚಿದ್ರೆ, ಧನಂಜಯ್, ರಾಘವೇಂದ್ರ ರಾಜ್ ಕುಮಾರ್, ಪಿ ರವಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ.
kharabu song
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel