ಚೆನ್ನೈ : ದಕ್ಷಿಣ ಭಾರತದ ಪ್ರಮುಖ ನಟಿ ಖುಷ್ಬೂ ಅವರನ್ನು ಜೋಕರ್ ಎಂದು ನಟಿ ಹಾಗೂ ನೃತ್ಯ ನಿರ್ದೇಶಕಿ ಗಾಯತ್ರಿ ರಘುರಾಮ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರಕಿಯಾಗಿರುವ ಖುಷ್ಬೂ ಅವರು ಟೀಕಿಸಿದ್ದರು. ಖುಷ್ಬೂ ಅವರು ತಮ್ಮ ಟ್ವೀಟ್ ನಲ್ಲಿ, ಪ್ರಧಾನಮಂತ್ರಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಭಾರತದ ಪ್ರಾಚೀನ ಭಾಷೆಯಾಗಿರುವ ತಮಿಳಿನಲ್ಲಿ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದರು.
ಖುಷ್ಬೂ ಅವರ ಈ ಟೀಕೆಗಳಿಗೆ ನಟಿ, ಬಿಜೆಪಿ ಸದಸ್ಯೆ ಗಾಯತ್ರಿ ರಘುರಾಮ್ ತಿರುಗೇಟು ನೀಡಿದ್ದಾರೆ. ಗಾಯಿತ್ರಿ ಅವರು ತಮ್ಮ ಟ್ವಿಟ್ವರ್ ನಲ್ಲಿ ಖುಷ್ಬೂ ಓರ್ವ ಜೋಕರ್ ಎಂದು ದೂರಿದ್ದಾರೆ.