ಕೆ.ಆರ್.ಮಾರ್ಕೆಟ್ ನಲ್ಲಿ ‘ಫೋಕಸ್’ ಆದ ದಿಯಾ ಬ್ಯೂಟಿ…ಹೂವು ಚೆಲುವೆಲ್ಲ ನಂದೆಂದಿತು ಎಂದ ಖುಷಿ…
ದಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಸರಳ ಸಿಗ್ದ ಸುಂದರಿ ಖುಷಿ ರವಿ ಹೊಸ ಲುಕ್ ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಬೆಳಂ ಬೆಳಗ್ಗೆ ಹೂವುಗಳ ಮಧ್ಯೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್ ನಲ್ಲಿ ಕಂಗೊಳಿಸಿರುವ ಖುಷಿಯ ಚೆಂದದ ಪಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಹೂವುಗಳ ಮಧ್ಯೆ ಮತ್ತೊಂದು ಹೂವು ನೋಡಿ ಫ್ಯಾನ್ಸ್ ಮನಮೋಹಕ ಎನ್ನುತ್ತಿದ್ದಾರೆ.
ವಿಂಟೇಜ್ ಲುಕ್ ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ. ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳು ಸೇರಿದಂತೆ ಒಂದಿಷ್ಟು ತಾರೆಯರಿಗೆ ಫೋಕಸ್ ಫೋಟೋಗ್ರಫಿ ಸ್ಟುಡಿಯೋ ಅಚ್ಚುಮೆಚ್ಚು. ಮದುವೆ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಈ ಸ್ಟುಡಿಯೋ ಹೆಸರುವಾಸಿ.
Khushi Ravi: Diya beauty became the ‘focus’ in KR market…Khushi said the flower is beautiful…