‘ಲವ್ ಮೊಕ್ಟೈಲ್’ ಗೆ “ಕಿಚ್ಚ” ಫಿದಾ!
ಲವ್ ಮೊಕ್ಟೈಲ್ ಸಿನಿಮಾ ನೋಡಿದ “ರನ್ನ”
ಡಾರ್ಲಿಂಗ್ ಕೃಷ್ಣನಿಗೆ “ಪೈಲ್ವಾನ್” ಸಾಥ್
ಡಾರ್ಲಿಂಗ್..ಡಾಲಿoಗ್.. ಎಂದು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಕೃಷ್ಣ ನಟಿಸಿ ನಿರ್ದೇಶನದ ‘ಲವ್ ಮೊಕ್ಟೈಲ್’ ಸಿನಿಮಾ ಸಿನಿ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡುತ್ತಿದೆ. ನವಿರಾದ ಪ್ರೇಮ್ ಕಹಾನಿ, ಎಮೋಶನಲ್ ಕಂಟೆAಟ್ ಗೆ ಪ್ರೇಕ್ಷಕಪ್ರಭು ಫಿದಾ ಆಗಿದ್ದಾನೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರವನ್ನು ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಕೂಡ ನೋಡಿ ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ಲವ್ ಮೊಕ್ಟೈಲ್ ಬಗ್ಗೆ ಮೆಚ್ಚುಗೆ
ಡಾರ್ಲಿಂಗ್ ಕೃಷ್ಣ ನಿರ್ದೇಶನ ಶೈಲಿ, ಚಿತ್ರವನ್ನು ನರೇಟ್ ಮಾಡಿದ ರೀತಿಯನ್ನು ಸುದೀಪ್ ಮೆಚ್ಚಿ ಹೊಗಳಿದ್ದಾರೆ. ಸಿನಿಮಾ ನೋಡಿ ತಮ್ಮ ಟ್ವಿಟ್ಟರ್ನಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ಈ ಮೊದಲು ಚಿತ್ರದ ಟ್ರೈಲರ್ಗೆ ವಾಯ್ಸ್ ನೀಡಿದ್ದ ಕಿಚ್ಚ ಚಿತ್ರದ ಆಡಿಯೋ ಬಿಡುಗಡೆಯಲ್ಲೂ ಚಿತ್ರಕ್ಕೆ ಸಾಥ್ ನೀಡಿದ್ರು. ಹೀಗೆ ,ಆರಂಭದಿAದಲೂ ಚಿತ್ರಕ್ಕೆ ಸಾಥ್ ನೀಡಿದ್ದ ಸುದೀಪ ಈಗ ಖುದ್ದಾಗಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರೋದು ಚಿತ್ರತಂಡಕ್ಕೆ ಡಬಲ್ ಖುಷಿ ನೀಡಿದೆ.