kiccha sudeep
ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ತಾಯಿರುವ ಜೋಡಿ ಅಂದ್ರೆ ಅದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಲವ್ ಮಾಕ್ಟೇಲ್ ನಲ್ಲಿ ಒಟ್ಟಾಗಿ ನಟಿಸಿ ಜನಮನಗೆದ್ದಿರುವ ಈ ಲೈಫ್ ಜೋಡಿ ರಿಯಲ್ ಲೈಫ್ ನಲ್ಲೂ ಲವರ್ಸ್ ಅನ್ನೋ ವಿಚಾರ ಹೊಸದೇನಲ್ಲ. ಇತ್ತೀಚೆಗಷ್ಟೇ ಈ ಜೋಡಿ ಮದುವೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ತೆರ ಎಳೆದಿದ್ದಾರೆ. ಮದುವೆ ದಿನಾಂಕ ಬಹಿರಂಗ ಪಡಿಸುತ್ತಿದ್ದಂತೆಯೇ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸ್ಯಾಂಡಲ್ ವುಡ್ ನ ರೋಮ್ಯಾಮಟಿಕ್ ಕಪಲ್ ಗೆ ಶುಭ ಹಾರೈಸ್ತಿದ್ದಾರೆ. ಆದ್ರೆ ವಿಶೇಷ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಜೋಡಿಗೆ ಶುಭಹಾರೈಸಿರೋದು.
ಹೌದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿರುವ ಸುದೀಪ್, ‘ಫೆಬ್ರವರಿ 14ಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮಬ್ಬರಿಗೂ ಶುಭಹಾರೈಕೆಗಳು. ನೀವು ಯಾವಾಗಲು ಹೀಗೆ ಖುಷಿಯಾಗಿ ಜೊತೆಯಾಗಿರಿ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಬ್ಬರ ಫೋಟೋವನ್ನು ಶೇರ್ ಮಾಡಿದ್ದಾರೆ. ಅಂದ್ಹಾಗೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸುಮಾರು 6 ವರ್ಷಗಳಿಂದಲೂ ಪ್ರೇಮಿಸುತ್ತಿದ್ದಾರೆ. ಈ ಜೊಡಿ ಇದೀಗ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಸದ್ಯ ಫೆಬ್ರವರಿ 14 ಅದ್ರಲ್ಲೂ ಪ್ರೇಮಿಗಳ ದಿನಾಚರಣೆಯಂದೇ ಈ ಲವ್ ಬರ್ಡ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಮದುವೆ ದಿನಾಂಕವನ್ನು ರಿವೀಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
‘ದಶಾವತಾರ’ನ ಹುಟ್ಟಹಬ್ಬಕ್ಕೆ ಶುಭಾಷಯ ತಿಳಿಸಿದ ‘ಸ್ಯಾಂಡಲ್ ವುಡ್ ‘ಕಿಚ್ಚ’..!
kiccha sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel