ಕ್ರಿಕೆಟ್ ಆಟಗಾರ ಗಬ್ಬರ್ ಸಿಂಗ್ ಶಿಖರ್ ಧವನ್ ಅವರನ್ನ ಭೇಟಿ ಮಾಡಿದ ಕಿಚ್ಚ ಸುದೀಪ್….
ಸಿನಿಮಾ ಹೊರತುಪಡಿಸಿ ನಟ ಕಿಚ್ಚ ಸುದೀಪ್ ಗೆ ಕ್ರಿಕೆಟ್ ಮೇಲೆ ಅತಿ ಹೆಚ್ಚು ಪ್ರೀತಿ ಇದೆ. ಸುದೀಪ್ ಸಧ್ಯಕ್ಕೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತರಬೇತಿ ನಡೆಸುತ್ತಿದ್ದಾರೆ.
ಇದೇ ವೇಳೆ ನಟ ಕಿಚ್ಚ ಸುದೀಪ್ ಭಾರತ ಕ್ರಿಕೆಟ್ ತಂಡದ ಗಬ್ಬರ್ ಸಿಂಗ್ ಶಿಖರ್ ಧವನ್ ಅವರನ್ನ ಭೇಟಿ ಮಾಡಿದ್ದಾರೆ. ಧವನ್ ಬೆಂಗಳೂರಿನ NCA ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಸುದೀಪ್ “ ಎಂಥಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ . ಮುಂಬರುವ IPL ನಲ್ಲಿ ನಿಮಗೆ ಒಳ್ಳೆಯದಾಗಲಿ, ನಿಮ್ಮ ಜೊತೆ ಕಾಲ ಕಳೆದಿದ್ದು ಖುಷಿ ತಂದಿದೆ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
ಇವರಿಬ್ಬರ ಫೊಟೋ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಧ್ಯ ಭಾರತ ಕ್ರಿಕೆಟ್ ತಂಡದಿಂದ ಹೊರಗಿರುವ ಶಿಖರ್ ಧವನ್ IPL 2023ರ IPLಗಾಗಿ ಆಡಲು ಶಿಖರ್ ಧವನ್ ಸಿದ್ಧತೆಯಲ್ಲಿದ್ದಾರೆ. IPL ನಲ್ಲಿ ಅಬ್ಬರಿಸಲು ಶಿಖರ್ ರೆಡಿಯಾಗಿದ್ದಾರೆ.
Kiccha Sudeep: Kiccha Sudeep who met Gabbar Singh Shikhar Dhawan….