ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ… ಕಿಚ್ಚ ಸುದೀಪ್ ಹೇಳಿದ್ದೇನು..?
ಬೆಂಗಳೂರು: BBMP ವ್ಯಾಪ್ತಿಯಲ್ಲಿನ ಚಿತ್ರಮಂದಿಗಳು ಸೇರಿ ಒಟ್ಟು 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸ್ಥಾನ ಭರ್ತಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೊಸ ನಿಯಮ ಹೊರೆಡಿಸಿರುವ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಫ್ಯಾನ್ಸ್ ಗರಂ ಆಗಿದ್ದಾರೆ. ಸರ್ಕಾರದ ಆದೇಶದ ವಿರುದ್ಧ ಸಿನಿಪ್ರಿಯರು ಚಿತ್ರೋದ್ಯಮವೇ ಆಕ್ರೋಶ ಹೊರಹಾಕಿದೆ. ಅದರಂತೆ ಇದೀಗ ಕಿಚ್ಚ ಸುದೀಪ್ ಅವರು ಸರ್ಕಾರದ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿ ಎಂಬುದು ನಿಜಕ್ಕೂ ಸಂಕಷ್ಟದ ವಿಷಯ. ಈಗಷ್ಟೇ ಬಿಡುಗಡೆಯಾದ ಚಿತ್ರಕ್ಕೆ ಇದು ಶಾಕಿಂಗ್ ವಿಚಾರ. ಆದರೆ ಒಂದು ಒಳ್ಳೆಯ ಉದ್ದೇಶಕ್ಕೆ ಈ ನಿಯಮ ಜಾರಿಮಾಡಲಾಗಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸರ್ಕಾರದ ನಿರ್ಧಾರ ಗೌರವಿಸುವುದು ಕರ್ತವ್ಯ ಎಂದಿದ್ದಾರೆ. ಅಷ್ಟೇ ಅಲ್ಲ ಸರ್ಕಾರದ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಯುವರತ್ನ ಸಿನಿಮಾ ಬಗ್ಗೆಯೂ ಮಾತನಾಡಿರುವ ಕಿಚ್ಚ ಈ ಪರಿಸ್ಥಿತಿಯನ್ನು ಗೆದ್ದು ಯಶಸ್ವಿಯಾಗಿ ಹೊರಹೊಮ್ಮುವ ಶಕ್ತಿ ಯುವರತ್ನ ಚಿತ್ರಕ್ಕೆ ನೀಡಲಿ ಎಂದು ಹಾರೈಸಿದ್ದಾರೆ.
ಮಾ. 31ಕ್ಕೆ ಹೇಳಿದ್ರೂ ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ… ಸರ್ಕಾರದ ನಡೆ ವಿರುದ್ಧ ಅಪ್ಪು ಆಕ್ರೋಶ..!
ಕಬ್ಜ ಶೂಟಿಂಗ್ ವೇಳೆ ಉಪ್ಪಿ ತಲೆಗೆ ರಾಡ್ ತಗುಲಿ ಪೆಟ್ಟು..!
90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!
ಆ ಡೈರಕ್ಟರ್ ಜೊತೆ ರಶ್ಮಿಕಾ ಚರ್ಚೆ : ಬಾಲಿವುಡ್ ನಲ್ಲಿ ರಶ್ಮಿಕಾ ಸದ್ದು…








