ಮಾ. 31ಕ್ಕೆ ಹೇಳಿದ್ರೂ ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ… ಸರ್ಕಾರದ ನಡೆ ವಿರುದ್ಧ ಅಪ್ಪು ಆಕ್ರೋಶ..!

1 min read

ಮಾ. 31ಕ್ಕೆ ಹೇಳಿದ್ರೂ ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ… ಸರ್ಕಾರದ ನಡೆ ವಿರುದ್ಧ ಅಪ್ಪು ಆಕ್ರೋಶ..!

ಬೆಂಗಳೂರು: BBMP ವ್ಯಾಪ್ತಿಯಲ್ಲಿನ ಚಿತ್ರಮಂದಿಗಳು ಸೇರಿ ಒಟ್ಟು 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸ್ಥಾನ ಭರ್ತಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೊಸ ನಿಯಮ ಹೊರೆಡಿಸಿರುವ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಫ್ಯಾನ್ಸ್ ಗರಂ ಆಗಿದ್ದಾರೆ. ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರದಿಂದ ಒಳ್ಳೆಯ ಸಿನಿಮಾ ಕೊಲೆಯಾದಂತಾಗುತ್ತದೆ. ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಮಾ.31ರಂದು ರಾತ್ರಿ ಘೋಷಣೆ ಮಾಡಿದ್ದರೂ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೆವು. ಸಿನಿಮಾ ಬಿಡುಗಡೆಗೂ 4-5 ದಿನದ ಮೊದಲೇ ಗೊತ್ತಾಗಿದ್ದರೆ ರಿಲೀಸ್ ಮಾಡುತ್ತಿರಲಿಲ್ಲ, ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡ್ತಿದ್ವಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗ ಭಾನುವಾರದವರೆಗೆ ಟಿಕೆಟ್ ಕೊಟ್ಟಿದ್ದೇವೆ. ಇದ್ದಕ್ಕಿದ್ದಂತೆ ಈ ರೀತಿ ಘೋಷಣೆ ಮಾಡಿದರೆ ಹೇಗೆ. ನಾವು ಸುಧಾರಿಸಿಕೊಳ್ಳುವುದು ಕಷ್ಟ. ಈಗ ಬಿಡುಗಡೆಯಾಗಿ ಸಿನಿಮಾವನ್ನು ಜನ ಇಷ್ಟಪಟ್ಟು ನೋಡುತ್ತಿರುವಾಗ ಈ ರೀತಿ ಘೋಷಣೆ ಮಾಡಿದರೆ ಒಳ್ಳೆ ಸಿನಿಮಾವನ್ನು ಕೊಲೆ ಮಾಡಿದಂತಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೇ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಎಂದು ಹೇಳುವುದು ಸುಲಭ. ಆದರೆ ಎಲ್ಲ ಬ್ಯುಸಿನೆಸ್ ಈ ರೀತಿ ಕೆಲಸ ಮಾಡಲ್ಲ. ಇದರಿಂದಾಗಿ ವಿತರಕರು, ಸಿನಿಮಾ ತಂಡ ಸೇರಿದಂತೆ ಎಲ್ಲರಲ್ಲೂ ಗೊಂದಲ ಉಂಟಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡುವ ಕೆಲಸ ಸಹ ಆಗಬೇಕಿದೆ. ಸರ್ಕಾರದ ಜೊತೆ ಮಾತನಾಡಿ ಕಾಲಾವಕಾಶ ಕೊಡಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

BIGGBOSS 8 : ವಿಶ್ವನಾಥ್ ಗೆ ಚಕ್ರವರ್ತಿ ಕೊಟ್ಟ ಸಲಹೆ ಏನು..? ಅದಕ್ಕೆ ವಿಶ್ವ ಹೇಳಿದ್ದೇನು..?  

ಕಬ್ಜ ಶೂಟಿಂಗ್ ವೇಳೆ ಉಪ್ಪಿ ತಲೆಗೆ ರಾಡ್ ತಗುಲಿ ಪೆಟ್ಟು..!

90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!

ಆ ಡೈರಕ್ಟರ್ ಜೊತೆ ರಶ್ಮಿಕಾ ಚರ್ಚೆ : ಬಾಲಿವುಡ್ ನಲ್ಲಿ ರಶ್ಮಿಕಾ ಸದ್ದು…

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd