ತಮಿಳಿನ ಖ್ಯಾತ ನಿರ್ದೇಶಕರ ಜೊತೆಗೆ ಕಿಚ್ಚ ಸುದೀಪ್ ಮುಂದಿನ ಸಿನಿಮಾ..!!
1 min read
ತಮಿಳಿನ ಖ್ಯಾತ ನಿರ್ದೇಶಕರ ಜೊತೆಗೆ ಕಿಚ್ಚ ಸುದೀಪ್ ಮುಂದಿನ ಸಿನಿಮಾ..!!
ನಟ ಕಿಚ್ಚ ಸುದೀಪ್ ಅವರು ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗಾಗಿ ಕಾಯ್ತಿದ್ದಾರೆ.. ಈ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.. ಅಲ್ಲದೇ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ‘ಭಾರ್ಗವ ಭಕ್ಷಿ’ಯಾಗಿ ವಿಶೇಷ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ತಿದ್ದಾರೆ..
ಹೀಗಿರೋಗ ಕಿಚ್ಚ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಕುತೂಹಲವಿದೆ.. ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅವರಿಗೆ ವಿಭಿನ್ನ ಕಥೆಯ ಸಿನಿಮಾಗೆ ತಮಿಳಿನ ಸ್ಟಾರ್ ನಿರ್ದೇಶಕರು ಆಕ್ಷನ್ ಹೇಳ್ತಿದ್ದಾರೆ ಅನ್ನೋ ಸುದ್ದಿ ಈಗ ಹಲ್ ಚಲ್ ಸೃಷ್ಟಿ ಮಾಡಿದೆ..
ಕಿಚ್ಚ ಸುದೀಪ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ತಮಿಳು ನಿರ್ದೇಶಕ ವೆಂಕಟ್ ಪ್ರಭು ಸಜ್ಜಾಗಿದ್ದಾರೆ. ಸುದೀಪ್ ಅವರ ಮುಂದಿನ ಸಿನಿಮಾ ವೆಂಕಟ್ ಪ್ರಭು ಅವರ ಡೈರೆಕ್ಷನ್ ನಲ್ಲಿ ಮೂಡಿ ಬರಲಿದೆ. ವೆಂಕಟ್ ಪ್ರಭು ತಮಿಳಿನಲ್ಲಿ ಸುಮಾರು ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ನಿರ್ದೇಶನದ ಸಿನಿಮಾ ಮಾನಾಡು ಸಿನಿಮಾ ಹಿಟ್ ಆಗಿದೆ.. ಇವರು ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳ್ತಿದ್ದು , ಈ ಕಥೆಯೂ ವಿಭಿನ್ನವಾಗಿರಲಿದೆ ಎನ್ನಲಾಗಿದೆ.. ಅಂದ್ಹಾಗೆ ಈ ವಿಚಾರವನ್ನ ಸಂದರ್ಶನವೊಂದ್ರಲ್ಲಿ ಸುದೀಪ್ ಅವರೇ ಹೇಳಿಕೊಂಡಿದ್ದರು..
ಇನ್ನು ಈ ಹಿಂದೆ ನಿರ್ದೇಶಕ ವೆಂಕಟ್ ಪ್ರಭು ನಟ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಸುದೀಪ್ ಅವರ ಆತಿತ್ಯ ಸ್ವೀಕರಿಸಿದ್ದರು. ಆಗ ಸುದೀಪ್ ಮತ್ತು ವೆಂಕಟ್ ಅವರ ಫೋಟೊ ವೈರಲ್ ಆಗಿತ್ತು. ಅದೇ ಸಮಯದಲ್ಲಿ ಸುದೀಪ್ ಮತ್ತು ವೆಂಕಟ್ ಅವರ ಸಿನಿಮಾದ ಮಾತು ಕತೆ ಮುಗಿದಿದೆ ಎನ್ನಲಾಗಿದೆ.