Bengaluru : ಏಳಿಗೆ ಸಹಿಸಲಾರದೆ ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ್ದ ನಾಲ್ವರು ಅರೆಸ್ಟ್
ಏಳಿಗೆ ಸಹಿಸಲಾರದೆ ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ್ದ ನಾಲ್ವರು ಆರೋಪಿಗಳನ್ನ ಬೆಂಗಳೂರು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ..
ಶೇಖ್ ಜಬಿವುಲ್ಲಾ, ಸೈಯದ್ ಅಬ್ದುಲ್, ಶಹಬಾಜ್ಹ್, ರಿಯಾಜ್ಹ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಕೆ.ಜಿ ಹಳ್ಳಿ ರಾಮಾ ಟೆಂಟ್ ರೋಡ್ ಬಳಿಯಿಂದ ಸೈಯದ್ ನಯಾಜ್ಹ್ ನನ್ನ ಕಿಡ್ನಾಪ್ ಮಾಡಿದ್ದರು.
ಫೆ. 16 ರಂದು BMW ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.
ಸೈಯದ್ ನಯಾಜ್ಹ್ ಕಣ್ಣಿಗೆ ಬಟ್ಟೆ ಕಟ್ಟಿ ಚಾಕು ತೋರಿಸಿ ಕೆ.ಆರ್ ಪುರಂ ಕಡೆ ಕರೆದೊಯ್ದಿದ್ದರು.
ನಂತರ ಅದೇ ದಿನ ಆರೋಪಿಗಳು ಸೈಯದ್ ನಯಾಜ್ಹ್ ನನ್ನ ಕೆ.ಆರ್ ಪುರಂ ಬಳಿಯೇ ಬಿಟ್ಟು ಪರಾರಿಯಾಗಿದ್ದರು.
ಮಾರನೇ ದಿನ ಸೈಯದ್ ಗೆ ವಾಟ್ಸಪ್ ಕಾಲ್ ಮಾಡಿ ಮೂರು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು. ಕಿಡ್ನಾಪ್ ನ ಪ್ರಮುಖ ಸೂತ್ರಧಾರ ಅಸ್ಲಾಂಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸೈಯದ್ ಇಂಟಿರಿಯರ್ ಹಾಗೂ ರಿಯಲ್ ಎಸ್ಟೇಟ್ ಬ್ಯುಸಿನಸ್ ನಡೆಸ್ತಿದ್ದ. ಸೈಯದ್ ನ ಬೆಳವಣಿಗೆ ಸಹಿಸೋಕಾಗದೇ ಅಸ್ಲಾಂ ಕಿಡ್ನಾಪ್ ಮಾಡೋಕೆ ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ.
ಸದ್ಯ ಕೆಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ..








