ಬ್ರಿಟನ್ ನಲ್ಲಿಯೇ ಉಳಿಯಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ ವಿಜಯ್ ಮಲ್ಯ..!

1 min read

ಬ್ರಿಟನ್ ನಲ್ಲಿಯೇ ಉಳಿಯಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ ವಿಜಯ್ ಮಲ್ಯ..!

ಲಂಡನ್ : ಬ್ಯಾಂಕಿಗೆ ಬಹುಕೋಟಿ ವಂಚಿಸಿ ಭಾರತದಿಂದ ಪರಾರಿಯಾಗಿ ಸದ್ಯ ಬ್ರಿಟನ್ ನಲ್ಲಿ ನೆಲೆಯೂರಿರುವ ‘ಕಿಂಗ್ ಫಿಶರ್’ ಒಒಡೆಯ ವಿಜಯ್ ಮಲ್ಯ, ಸದ್ಯ UKಯಲ್ಲಿಯೇ ಉಳಿದುಕೊಳ್ಳಲು ನೆರವಾಗುವ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರಂತೆ. ಹೌದು ಅಲ್ಲಿನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಈ ಕುರಿತಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ.

ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ : ಸಮೀಕ್ಷೆ ಏನ್ ಹೇಳತ್ತೆ..!

ಹೌದು ದೇಶಭ್ರಷ್ಟ ಆರ್ಥಿಕ ಅಪರಾಧಿ ಹಣೆಪಟ್ಟಿ ಅಂಟಿಸಿಕೊಂಡಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ವಿರುದ್ಧ ಬ್ರಿಟನ್ ಸುಪ್ರೀಂಕೋರ್ಟ್ನಲ್ಲಿ ವಿಜಯ್ ಮಲ್ಯ ಕಾನೂನು ಹೋರಾಟ ನಡೆಸಿದ್ದು, ಕಳೆದ ವರ್ಷ ಮಲ್ಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಗಡಿಪಾರು ಆದೇಶ ಅಧಿಕೃತವಾಗಿ ಹೊರಬರುವವರೆಗೂ ಗೌಪ್ಯ ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ನಡೆಯುತ್ತಲೇ ಇರುತ್ತದೆ ಎಂದು ಬ್ರಿಟನ್ ಗೃಹ ಕಚೇರಿ ಖಚಿತಪಡಿಸಿದೆ. ಹೀಗಾಗಿ ಮಲ್ಯ ಅವರು ಬ್ರಿಟನ್ ನಲ್ಲಿ ರಾಜಾಶ್ರಯ ಕೋರಿದ್ದಾರೆ ಎಂಬ ಅನುಮಾನ ಹೆಚ್ಚಿಸಿದೆ.

AAP ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ ಖಾಯಂ..!

ಮಲ್ಯರ ಗಡಿಪಾರು ಆದೇಶವನ್ನು ಎತ್ತಿಹಿಡಿಯಲಾಗಿದ್ದರೂ, ಅವರು ರಾಜಾಶ್ರಯ ಪಡೆಯಲು ಪ್ರೀತಿ ಪಟೇಲ್ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಮಾರ್ಗವಿದೆ ಎಂದು ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ತಿಳಿಸಿದ್ದಾರೆ. ಕಿಂಗ್ ಫಿಶರ್ ಏರ್ಲೈನ್ಸ್ ವಿಮಾನ ಸಂಸ್ಥೆಯ ಹೆಸರಿನಲ್ಲಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಆದೇಶಕ್ಕೆ ಪ್ರೀತಿ ಪಟೇಲ್ ಸಹಿ ಹಾಕುವವರೆಗೂ ಬ್ರಿಟನ್ನಲ್ಲಿ ಜಾಮೀನಿನ ಮೇಲೆ ಉಳಿದುಕೊಳ್ಳಲು ಅವಕಾಶವಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd