Bigg Boss Kannada | ಬಿಗ್ ಬಾಸ್ : ಮೊದಲ ಎಲಿಮಿನೇಷನ್!
ಬಿಗ್ ಬಾಸ್ ಮನೆಯಿಂದ ಕಿರಣ್ ಯೋಗೇಶ್ವರ್ ಔಟ್
ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್
ಮೊದಲ ವಾರವೇ ಬಿಗ್ ಬಾಸ್ ಪಯಣ ಅಂತ್ಯ
ಎಲಿಮಿನೇಷನ್ ಬಳಿಕ ಬಿಗ್ ಬಾಸ್ ಆಟ ಚುರುಕು
ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ನಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ.
ಮೊದಲ ವಾರವೇ ಕಿರಣ್ ಯೋಗೇಶ್ವರ್ ಅವರು ದೊಡ್ಡ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಅತಿ ಕಡಿಮೆ ವೋಟ್ ಬಂದಿರುವ ಕಾರಣ ಮೊದಲ ವಾರವೇ ಕಿರಣ್ ಯೋಗೇಶ್ವರ್ ಅವರು ಬಿಗ್ ಬಾಸ್ ಪಯಣ ಮುಗಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಸಾನ್ಯಾ ಅಯ್ಯರ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಅರ್ಜುನ್ ರಮೇಶ್, ಉದಯ್ ಸೂರ್ಯ, ಸ್ಪೂರ್ತಿ ಗೌಡ, ಜಯ ಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್ ನಾಮಿನೇಟ್ ಆಗಿದ್ದರು.
ಈ ಪೈಕಿ ಅತಿ ಕಡಿಮೆ ವೋಟ್ ಪಡೆದಿರುವ ಕಿರಣ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಇನ್ನು ಮನೆಯಿಂದ ಹೊರ ಬರೋದಕ್ಕೂ ಮುನ್ನಾ ಒಂದೇ ವಾರದಲ್ಲಿ ನಾನು ಎಲ್ಲರ ಜೊತೆ ಕ್ಲೋಸ್ ಆದೆ.
ನಿಮ್ಮೆಲ್ಲರಲ್ಲೂ ಮಿಸ್ ಮಾಡಿಕೊಳ್ಳುತ್ತೇನೆ. ಈ ಮನೆಯೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಿರಣ್ ಯೋಗೇಶ್ವರ್ ವಿದಾಯ ಹೇಳಿದ್ದಾರೆ.