ಫಸ್ಟ್ ಟೆಸ್ಟ್ ಮ್ಯಾಚ್ 2ನೇ ದಿನ : ಆರಂಭದಲ್ಲಿ ಶ್ರೇ`ಯಶಸ್ಸು’.. ಕೊನೆಯಲ್ಲಿ ಕಿವೀಸ್ ಬೊಂಬಾಟ್ ಬ್ಯಾಟಿಂಗ್

1 min read
Kiwis saaksha tv

ಟೀಮ್ ಇಂಡಿಯಾ ಕಾನ್ಪುರ ಟೆಸ್ಟ್ನಲ್ಲಿ ಬೃಹತ್ ಮೊತ್ತದ ಕನಸು ಕಂಡಿತ್ತು. ಆದರೆ ಅದು ಮೊದಲ ಇನ್ನಿಂಗ್ಸ್ನಲ್ಲಿ ನನಸಾಗಲಿಲ್ಲ.

ಲಂಚ್ ನಂತರ 345 ರನ್ಗಳಿಗೆ ಆಲೌಟ್ ಆದ ಭಾರತ, ನಂತರ ಕಿವೀಸ್ ವಿಕೆಟ್ ಪಡೆಯಲು ಕೂಡ ಪರದಾಡಿತು.

2ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಳ್ಳದೆ 129 ರನ್ಗಳಿಸಿ ಟೀಮ್ ಇಂಡಿಯಾಕ್ಕೆ ಚಾಲೆಂಜ್ ಒಡ್ಡಿದೆ.

ಮೊದಲ ದಿನ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಆಟ ಆರಂಭಿಸಿದರು. ಆದರೆ ಟಿಮ್ ಸೌಥಿ ಬೇರೆಯದ್ದೇ ಲೆಕ್ಕಾಚಾರದಲ್ಲಿ ಬೌಲಿಂಗ್ ಮಾಡಿದ್ದರು.

ಜಡೇಜಾ ಮೊದಲ ದಿನದ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಸೌಥಿಗೆ ವಿಕೆಟ್ ಒಪ್ಪಿಸಿದರು.

ಶ್ರೇಯಸ್ ಅಯ್ಯರ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿದರು. ಅಷ್ಟೇ ಅಲ್ಲ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕದ ಸಂಭ್ರಮ ಆಚರಿಸಿಕೊಂಡ ವಿಶಿಷ್ಠ ಪಟ್ಟಿಯಲ್ಲಿ ಸೇರಿಕೊಂಡರು.

ಈ ನಡುವೆ ವೃದ್ಧಿಮಾನ್ ಸಾಹಾ ಕೂಡ ಸೌಥಿ ಎಸೆತದಲ್ಲಿ ಔಟಾದರು. ಶ್ರೇಯಸ್ ಅಯ್ಯರ್ 13 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 105 ರನ್ಗಳಿಸಿ ಔಟಾದರು.

ಅಕ್ಸರ್ ಪಟೇಲ್ ಕೊಡಗೆ 1 ರನ್ ಮಾತ್ರ ಆಗಿತ್ತು. ಇದೆಲ್ಲದರ ಮಧ್ಯೆ ಅಶ್ವಿನ್ ಹೋರಾಟ ತೋರಿದರು. ಲಂಚ್ ಬಳಿಕ ಅಶ್ವಿನ್ 38 ರನ್ಗಳಿಸಿ ಅಜಸ್ ಪಟೇಲ್ಗೆ ಔಟಾದರು.

ಇಶಾಂತ್ ಔಟಾಗುವುದರೊಂದಿಗೆ ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ 345 ರನ್ಗಳಿಗೆ ಅಂತ್ಯಕಂಡಿತ್ತು. ಸೌಥಿ 5 ವಿಕೆಟ್ ಪಡೆದು ನ್ಯೂಜಿಲೆಂಡ್ ಹೋರಾಟಕ್ಕೆ ಜೀವ ತುಂಬಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಓಪನರ್ಗಳು ಟೀಮ್ ಇಂಡಿಯಾ ಬೌಲರ್ಗಳನ್ನು ಬೆಂಬಿಡದೆ ಕಾಡಿದರು. ರಕ್ಷಣಾತ್ಮಕ ಆಟದ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಬೌಂಡರಿಗಳಿಸಿದರು.

Kiwis saaksha tv

ಟೀಮ್ ಇಂಡಿಯಾ ಬೌಲರ್ಗಳು ಮಾಡಿದ ಎಲ್ಲಾ ರಣತಂತ್ರಗಳು ಉಲ್ಟಾ ಆದವು. ವಿಲ್ ಯಂಗ್ ಮೊದಲಿಗರಾಗಿ ಅರ್ಧಶತಕ ಬಾರಿಸಿದರೆ, ಲೇಥಂ ದಿನದ ಕೊನೆಯಲ್ಲಿ ಆ ಸಾಧನೆ ಮಾಡಿದರು.

2ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಳ್ಳದೆ 129 ರನ್ಗಳಿಸಿದೆ. ಲೇಥಂ 50 ಹಾಗೂ ಯಂಗ್ 75 ರನ್ಗಳಿಸಿ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ಆಸರೆಯಾದ ಶ್ರೇಯಸ್ ಶತಕ, ಕಿವೀಸ್ ಆರಂಭಿಕ ಜೋಡಿಯ ಅಜೇಯ ಆಟ
ಟೀಮ್ ಇಂಡಿಯಾ ಕಾನ್ಪುರ ಟೆಸ್ಟ್ನಲ್ಲಿ ಬೃಹತ್ ಮೊತ್ತದ ಕನಸು ಕಂಡಿತ್ತು.

ಆದರೆ ಅದು ಮೊದಲ ಇನ್ನಿಂಗ್ಸ್ನಲ್ಲಿ ನನಸಾಗಲಿಲ್ಲ. ಲಂಚ್ ನಂತರ 345 ರನ್ಗಳಿಗೆ ಆಲೌಟ್ ಆದ ಭಾರತ, ನಂತರ ಕಿವೀಸ್ ವಿಕೆಟ್ ಪಡೆಯಲು ಕೂಡ ಪರದಾಡಿತು.

2ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಳ್ಳದೆ 129 ರನ್ಗಳಿಸಿ ಟೀಮ್ ಇಂಡಿಯಾಕ್ಕೆ ಚಾಲೆಂಜ್ ಒಡ್ಡಿದೆ.

ಮೊದಲ ದಿನ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಆಟ ಆರಂಭಿಸಿದರು.

ಆದರೆ ಟಿಮ್ ಸೌಥಿ ಬೇರೆಯದ್ದೇ ಲೆಕ್ಕಾಚಾರದಲ್ಲಿ ಬೌಲಿಂಗ್ ಮಾಡಿದ್ದರು. ಜಡೇಜಾ ಮೊದಲ ದಿನದ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಸೌಥಿಗೆ ವಿಕೆಟ್ ಒಪ್ಪಿಸಿದರು.

ಶ್ರೇಯಸ್ ಅಯ್ಯರ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿದರು. ಅಷ್ಟೇ ಅಲ್ಲ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕದ ಸಂಭ್ರಮ ಆಚರಿಸಿಕೊಂಡ ವಿಶಿಷ್ಠ ಪಟ್ಟಿಯಲ್ಲಿ ಸೇರಿಕೊಂಡರು.

ಈ ನಡುವೆ ವೃದ್ಧಿಮಾನ್ ಸಾಹಾ ಕೂಡ ಸೌಥಿ ಎಸೆತದಲ್ಲಿ ಔಟಾದರು. ಶ್ರೇಯಸ್ ಅಯ್ಯರ್ 13 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 105 ರನ್ಗಳಿಸಿ ಔಟಾದರು.

ಅಕ್ಸರ್ ಪಟೇಲ್ ಕೊಡಗೆ 1 ರನ್ ಮಾತ್ರ ಆಗಿತ್ತು. ಇದೆಲ್ಲದರ ಮಧ್ಯೆ ಅಶ್ವಿನ್ ಹೋರಾಟ ತೋರಿದರು. ಲಂಚ್ ಬಳಿಕ ಅಶ್ವಿನ್ 38 ರನ್ಗಳಿಸಿ ಅಜಸ್ ಪಟೇಲ್ಗೆ ಔಟಾದರು.

ಇಶಾಂತ್ ಔಟಾಗುವುದರೊಂದಿಗೆ ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ 345 ರನ್ಗಳಿಗೆ ಅಂತ್ಯಕಂಡಿತ್ತು. ಸೌಥಿ 5 ವಿಕೆಟ್ ಪಡೆದು ನ್ಯೂಜಿಲೆಂಡ್ ಹೋರಾಟಕ್ಕೆ ಜೀವ ತುಂಬಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಓಪನರ್ಗಳು ಟೀಮ್ ಇಂಡಿಯಾ ಬೌಲರ್ಗಳನ್ನು ಬೆಂಬಿಡದೆ ಕಾಡಿದರು. ರಕ್ಷಣಾತ್ಮಕ ಆಟದ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಬೌಂಡರಿಗಳಿಸಿದರು.

ಟೀಮ್ ಇಂಡಿಯಾ ಬೌಲರ್ಗಳು ಮಾಡಿದ ಎಲ್ಲಾ ರಣತಂತ್ರಗಳು ಉಲ್ಟಾ ಆದವು. ವಿಲ್ ಯಂಗ್ ಮೊದಲಿಗರಾಗಿ ಅರ್ಧಶತಕ ಬಾರಿಸಿದರೆ, ಲೇಥಂ ದಿನದ ಕೊನೆಯಲ್ಲಿ ಆ ಸಾಧನೆ ಮಾಡಿದರು.

2ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಳ್ಳದೆ 129 ರನ್ಗಳಿಸಿದೆ. ಲೇಥಂ 50 ಹಾಗೂ ಯಂಗ್ 75 ರನ್ಗಳಿಸಿ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd