KKR vs PBKS Match | ರೈಡರ್ಸ್ ವಿರುದ್ಧ ರೈಸ್ ಆಗದ ಹೈದರಾಬಾದ್
ವೆಸ್ಟ್ ಇಂಡೀಸ್ ನ ಸ್ಟಾರ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರ ಆಲ್ ರೌಂಡರ್ ಪ್ರದರ್ಶನದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭರ್ಜರಿ ಗೆಲುವು ಸಾಧಸಿದೆ. ಇದರೊಂದಿಗೆ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಪ್ಲೇ ಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಗೆ 177 ರನ್ಗಳಿಸಿತು. ಈ ಸವಾಲು ಬೆನ್ನತ್ತಿದ ಸನ್ರೈಸರ್ಸ್ ಹೈದ್ರಾಬಾದ್ ಬ್ಯಾಟ್ಸಮನ್ಗಳ ವೈಫಲ್ಯದಿಂದಾಗಿ 20 ಓವರ್ಗಳಲ್ಲಿ 123/8 ರನ್ಗಳಿಸುವ ಮೂಲಕ 54 ರನ್ಗಳ ಸೋಲೊಪ್ಪಿಕೊಂಡಿತು.
ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಅಂಕ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿದೆ, ಇತ್ತ ಕೇನ್ ವಿಲಿಯಂ ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್ ನಿಂದ ಬಹುತೇಖ ಹೊರಬಿದ್ದಂತಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್ ಏಳು ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ನಂತರ ಅಜಿಂಕ್ಯಾ ರಹಾನೆ ಜೊತೆಯಾದ ನಿತೀಶ್ ರಾಣಾ 2ನೇ ವಿಕೆಟ್ ಗೆ 48 ರನ್ ಗಳ ಉಪಯುಕ್ತ ಕಾಣಿಕೆ ನೀಡಿದರು. ರಹಾನೆ 28 ರನ್ ಗಳಿಸಿದ್ರೆ, ರಾಣಾ 26 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 15 ರನ್ ಹಾಗೂ ರಿಂಕು ಸಿಂಗ್ 5 ರನ್ ಗಳಿಗೆ ಔಟ್ ಆಗುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಸಂಕಷ್ಟದ ಸ್ಥಿತಿಯಲ್ಲಿ ತಂಡದ ನೆರವಿಗೆ ಬಂದ ಸ್ಯಾಮ್ಸ್ ಬಿಲ್ಲಿಂಗ್ಸ್ 34 ರನ್ ಗಳಿಸಿದರು. ಇತ್ತ ರಸೆಲ್ ಕೂಡ 49 ರನ್ ಬಾರಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಆದರೆ ಕೊನೆ ಓವರ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್, 20 ರನ್ಗಳಿಸಿ ತಂಡದ ಮೊತ್ತವನ್ನ 177ಕ್ಕೆ ಏರಿಸಿದರು.
ಕೆಕೆಆರ್ ನೀಡಿದ 178 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ಚೇಸಿಂಗ್ನಲ್ಲಿ ಮುಗ್ಗರಿಸಿತು. ಹೈದ್ರಾಬಾದ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಂಸನ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ 9 , ನಿಕೋಲಸ್ ಪೂರನ್(2), ವಾಷಿಂಗ್ಟನ್ ಸುಂದರ್(4), ಶಶಾಂಕ್ ಸಿಂಗ್(11), ಜಾನ್ಸನ್(1) ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಎಡವಿದರು. ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ 43 ರನ್ ಹಾಗೂ ಐಡೆನ್ ಮಾರ್ಕ್ರಂ 32 ರನ್ ಗಳಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಹೈದರಾಬಾದ್ ತಂಡ 8 ವಿಕೆಟ್ ಗಳನ್ನು ಕಳೆದುಕೊಂಡು 54 ರನ್ ಗಳಿಂದ ಸೋಲು ಒಪ್ಪಿಕೊಂಡಿತು.
KKR vs SRH Kolkata Knight Riders beat Sunrisers Hyderabad by 54 runs