ಏಕದಿನ ನಾಯಕತ್ವಕ್ಕೆ ಕೊಹ್ಲಿಗಿಂತ ಕೆ.ಎಲ್.ರಾಹುಲ್ ಬೆಟ್ಟರ್

1 min read
Virat saaksha tv

ಏಕದಿನ ನಾಯಕತ್ವಕ್ಕೆ ಕೊಹ್ಲಿಗಿಂತ ಕೆ.ಎಲ್.ರಾಹುಲ್ ಬೆಟ್ಟರ್ KL Rahul saaksha tv

ಟೀಂ ಇಂಡಿಯಾ ಏಕದಿನ ನಾಯಕನಾಗಿ ಕೆಎಲ್ ರಾಹುಲ್ ಆಯ್ಕೆಯ ಕುರಿತು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್ ಕೆಲವು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿ ಆಯ್ಕೆ ಸಮಿತಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಬದಲಿಗೆ ರಾಹುಲ್ ಕಡೆಗೆ ಬಿಸಿಸಿಐ ಒಲವು ತೋರಿಸಿರುವುದು ಸಮರ್ಥನೀಯ ಸಂಗತಿ.

KL Rahul  saaksha tv

ಏಕದಿನ ಕ್ರಿಕೆಟ್ ನಾಯಕತ್ವ ವಿಚಾರಕ್ಕೆ ಬಂದರೇ ವಿರಾಟ್ ಕೊಹ್ಲಿಗಿಂತ ಕೆ.ಎಲ್.ರಾಹುಲ್ ಬೆಟ್ಟರ್ ಎಂದು ಪ್ರತಿಪಾದಿಸಿದ್ದಾರೆ.

ಇನ್ನು ಬಿಸಿಸಿಐಗೂ ಕೆ.ಎಲ್ ರಾಹುಲ್ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇದೆ. ಐಪಿಎಲ್ ನಲ್ಲಿ ರಾಹುಲ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಬಿಸಿಸಿಐ ನಿರ್ಧಾರವನ್ನು ಭಟ್ ಶ್ಲಾಘಿಸಿದ್ದಾರೆ.

 ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ  ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

ಈ ಸರಣಿಗೆ ಬಿಸಿಸಿಐ 18 ಸದಸ್ಯರ ತಂಡವನ್ನು ಪ್ರಕಟ ಮಾಡಿದ್ದು, ಕೆ.ಎಲ್.ರಾಹುಲ್ ಗೆ ನಾಯಕತ್ವ ವಹಿಸಿದೆ. ಅಲ್ಲದೇ ವೇಗಿ ಜಸ್ಪ್ರೀತ್ ಬುಮ್ರಾಗೆ ಉಪನಾಯಕನ ಪಟ್ಟ ನೀಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd