ಕೊಹ್ಲಿಯನ್ನ ಮೀರಿಸಿದ ರಾಹುಲ್ KL Rahul : ಕನ್ನಡಿಗನ ಆರ್ಭಟಕ್ಕೆ ಕೊಹ್ಲಿ ದಾಖಲೆ ಉಡೀಸ್
ಚೆನ್ನೈ : ಟೀಂ ಇಂಡಿಯಾದ ರಾಕಿಂಗ್ ಸ್ಟಾರ್, ಕನ್ನಡಿಗ ಕೆ.ಎಲ್ ರಾಹುಲ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನ ಧೂಳಿಪಟ ಮಾಡಿದ್ದಾರೆ.
ಟಿ 20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 5 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಐದು ಸಾವಿರ ರನ್ ಗಳಿಸಲು 167 ಇನ್ನಿಂಗ್ಸ್ ಗಳನ್ನ ತೆಗೆದುಕೊಂಡಿದ್ದರೇ ರಾಹುಲ್ ಕೇವಲ 143 ಇನ್ನಿಂಗ್ಸ್ ಗಳಲ್ಲಿ ಐದು ಸಾವಿರ ರನ್ ಗಳನ್ನ ಚಚ್ಚಿದ್ದಾರೆ.
ಇದನ್ನು ಗಮನಿಸಿದಾಗ ರಾಹುಲ್, ವಿರಾಟ್ ಗಿಂತ ವೇಗವಾಗಿ ರನ್ ದರ್ಬಾರು ನಡೆಸುತ್ತಿದ್ದಾರೆ.
ಇನ್ನು ಅತಿವೇಗವಾಗಿ ಐದು ಸಾವಿರ ರನ್ ಗಳಿಸಿದ ಪಟ್ಟಿಯಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.
ಕ್ರೀಸ್ ಗೇಲ್ ಕೇವಲ 132 ಪಂದ್ಯಗಳಲ್ಲಿ 5000 ರನ್ ಪೂರೈಸಿದ್ದಾರೆ. ನಂತರದ ಸ್ಥಾನ ಇದೀಗ ರಾಹುಲ್ ಪಾಲಾಗಿದೆ.
ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ಮಾರ್ಷ್ 144 ಇನ್ನಿಂಗ್ಸ್ ನಲ್ಲಿ 5000 ಸಾವಿರ ರನ್ ಸಿಡಿಸಿದ್ದಾರೆ.