ಆಸೀಸ್ ಟೆಸ್ಟ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಔಟ್
ಸಿಡ್ನಿ : ಟೀಂ ಇಂಡಿಯಾಗೆ ಆಸ್ಟ್ರೇಲಿಯಾದಲ್ಲಿ ಇಂಜ್ಯೂರಿ ಭೂತ ಪದೇ ಪದೇ ಕಾಟ ಕೊಡುತ್ತಲೇ ಇದೆ.
ಮೊದಲು ಗಾಯದ ಸಮಸ್ಯೆಯಿಂದ ಬೌಲರ್ ಇಶಾಂತ್ ಶರ್ಮಾ ಸರಣಿಯಿಂದ ಹೊರಬಿದ್ದರೇ ನಂತರ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಇಂಜ್ಯೂರಿ ಸಮಸ್ಯೆಯಿಂದಾಗಿ ಹೊರಬಂದ್ರು.
ಇದೀಗ ಟೀಂ ಇಂಡಿಯಾದ ರಾಂಕಿಂಗ್ ಸ್ಟಾರ್, ಕನ್ನಡಿಗ ಕೆ.ಎಲ್ ರಾಹುಲ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಟೀಂ ಇಂಡಿಯಾಗೆ ಆಘಾತವನ್ನುಂಟು ಮಾಡಿದೆ.
ಹೌದು..!
ಬ್ರಿಟನ್ ನಲ್ಲಿ ಮತ್ತೊಮ್ಮೆ ರಾಷ್ಟ್ರವ್ಯಾಪಿ ಲಾಕ್ ಡೌನ್ !
ಕೆ.ಎಲ್ ರಾಹುಲ್ ಅಭ್ಯಾಸ ನಡೆಸುವ ವೇಳೆ ಗಾಯಗೊಂಡಿದ್ದು, ಎಡ ಮಣಿಕಟ್ಟು ಉಳುಕಿದೆ. ಈ ಕಾರಣದಿಂದಾಗಿ ರಾಹುಲ್ ಸರಣಿಯಿಂದಲೇ ಹೊರ ಬೀಳಬೇಕಾಗಿದೆ. ಇದು ಟೀಂ ಇಂಡಿಯಾದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಬಹುದು.
ಕೆ ಎಲ್ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದೇ ಇದ್ದರೂ ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಮೂರನೇ ಪಂದ್ಯದಲ್ಲಿ ರಾಹುಲ್ ಕಣಕ್ಕಿಳಿಯಲಿದ್ದಾರೆ ಅಂತ ಕೂಡ ಹೇಳಲಾಗಿತ್ತು.
ಇನ್ನು ಮೂರನೇ ಟೆಸ್ಟ್ ಪಂದ್ಯ ಜ.7ರಿಂದ ಸಿಡ್ನಿಯಲ್ಲಿ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









