KL Rahul Wedding : ಹಸೆಮಣೆ ಏರಲು ಸಜ್ಜಾದ ಕೆ ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ….
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈನ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಸಂಪೂರ್ಣವಾಗಿ ವಿವಾಹ ಕಾರ್ಯಕ್ರಮಗಳು ಜರುಗಲಿವೆ.
ಭಾನುವಾರ ಮಧ್ಯಾಹ್ನ ಅಥಿಯಾ ಶೆಟ್ಟಿ ಮೆಹಂದಿ, ಹರಿಶಿನ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ರಾತ್ರಿ ಫಾರ್ಮ್ ಹೌಸ್ ನಲ್ಲಿ ನಡೆದ ಸಂಗೀತ ಸಮಾರಂಭದ ವಿಡಿಯೋ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರಷ್ಟೆ ಭಾಗವಹಿಸಿದ್ದಾರೆ ಎನ್ನಲಾಗಿದೆ.
ಅಥಿಯಾ ಮತ್ತು K L ರಾಹುಲ್ ಅವರ ವಿವಾಹ ಸಮಾರಂಭ ತುಂಬಾ ಸರಳವಾಗಿ ನಡೆಯಲಿದೆ ಎಂದು ವರದಿಯಾಗಿದೆ. ದಂಪತಿಯ ನಿಕಟ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಹೊರತುಪಡಿಸಿ ಕೆಲವು ಬಾಲಿವುಡ್ ಹಾಗೂ ಕ್ರಿಕೆಟಿಗರು ಮಾತ್ರ ಭಾಗವಹಿಸಲಿದ್ದಾರೆ.
ವಿಶೇಷವಾಗಿ ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಬರುವ ಅತಿಥಿಗಳಿಗೆ ಫೋನ್ ಬಳಸದಂತೆ ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯ ಫೋಟೋಗಳು ಮೊದಲೇ ಎಲ್ಲಿಯೂ ಲೀಕ್ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುನೀಲ್ ಶೆಟ್ಟಿ ಮಾಧ್ಯಮದವರ ಜೊತೆ ಮಾತನಾಡಿದ್ದು, ಮದುವೆಯ ಬಳಿಕ ಮಕ್ಕಳನ್ನು (ಕೆಎಲ್ ರಾಹುಲ್-ಅಥಿಯಾ) ನಿಮ್ಮ ಮುಂದೆ ಕರೆತರುತ್ತೇನೆ ಎಂದು ಪಾಪರಾಜಿಗಳಿಗೆ ಹೇಳಿದ್ದಾರೆ.
KL Rahul Wedding : KL Rahul and Athiya Shetty all set to tie the knot….








