ಹಾಲಿನ ದರ ಹೆಚ್ಚಿಸೋಕೆ ಮುಂದಾದ ಕೆಎಂಎಫ್

1 min read
Milk Saaksha Tv

ಹಾಲಿನ ದರ ಹೆಚ್ಚಿಸೋಕೆ ಮುಂದಾದ ಕೆಎಂಎಫ್

ಬೆಂಗಳೂರು: ರಾಜ್ಯ ಸರಕಾರ ಹಾಲಿನ ದರವನ್ನು ಏರಿಕೆ ಮಾಡಲು ಮುಂದಾಗಿದೆ. ಹಾಲಿನ ದರವನ್ನು ಪ್ರತಿ ಲೀಟರ್ ಗೆ  3 ರೂ ಹೆಚ್ಚಳ ಮಾಡೋದಕ್ಕೆ ಮುಂದಾಗಿದೆ. ಇದು ರಾಜ್ಯದ ಜನರಿಗೆ ಬಿಗ್ ಶಾಕ್ ನೀಡಿದೆ

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈಗ ಹಾಲಿನ ದರ ಏರಿಕೆಯಾದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹಾಲಿನ ದರವನ್ನು ಏರಿಸಲು ಮುಂದಾಗಿರುವ ಕೆಎಂಎಫ್. ನಂದಿನಿ ಹಾಲಿನ ದರ ಸದ್ಯ ಪ್ರತಿ ಲೀಟರ್ ಗೆ 37 ರೂ ಇದ್ದು ಈಗ 3 ರೂ ಹೆಚ್ಚಿಸಿದರೆ ಹಾಲಿನ ದರವು ಲೀಟರ್ ಗೆ 40 ರೂ ಆಗಲಿದೆ.

ಹಾಲಿನ ದರವನ್ನು ಏರಿಸಲು ಕೆಎಂಪ್ ಸರಕಾರ ಅನುಮತಿಗಾಗಿ ಕಾಯುತ್ತಿದೆ. ಇದಕ್ಕೆ ಸರಕಾರ ಅನುಮತಿ ನೀಡಿದ್ರೆ ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ ರೂ.3 ಹೆಚ್ಚಳವಾಗಲಿದೆ.ಈ ಕುರಿತು ಮಾತನಾಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು, ಹಾಲಿನ ದರ ಹೆಚ್ಚಳದ ಪ್ರಸ್ತಾವನೆಗೆ ಅನುಮತಿಸೋ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸೋದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd