ಆಸ್ಕರ್ 2022 – ಕೊಡ ಅತ್ಯುತ್ತಮ ಸಿನಿಮಾ – ವಿಲ್ ಸ್ಮಿತ್ ಅತ್ಯುತ್ತಮ ನಟ
ನಿನ್ನೆ (ಭಾನುವಾರ) ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿಲ್ ಸ್ಮಿತ್ ಮತ್ತು ಜೆಸ್ಸಿಕಾ ಚಸ್ಟೈನ್ ಅತ್ಯುತ್ತಮ ನಟನೆಗಾಗಿ ಆಸ್ಕರ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ‘ಕೊಡ’ ಅತ್ಯುತ್ತಮ ಸಿನಿಮಾ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. “ಸಮ್ಮರ್ ಆಫ್ ಸೋಲ್” ಅತ್ಯುತ್ತಮ ಸಾಕ್ಷ್ಯಚಿತ್ರದ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನುವಶಮಾಡಿಕೊಂಡಿದೆ. ಭಾರತೀಯ ಚಲನಚಿತ್ರ ರೈಟಿಂಗ್ ವಿತ್ ಫೈರ್ ಕೂಡ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಹುಮಾ ಖುರೇಷಿ ಅವರ ‘ಆರ್ಮಿ ಆಫ್ ದಿ ಡೆಡ್’ ಸಿನಿಮಾ ಅಭಿಮಾನಿಗಳ ಆಯ್ಕೆ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ವರ್ಷ ಜೇನ್ ಕ್ಯಾಂಪಿಯನ್ ಅವರ ಚಿತ್ರ ದಿ ಪವರ್ ಆಫ್ ದಿ ಡಾಗ್ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. 6 ಆಸ್ಕರ್ ಪ್ರಶಸ್ತಿಗಳನ್ನ ಗೆಲ್ಲುವು ಮೂಲಕ ಡ್ಯೂನ್ ಚಿತ್ರ ದಾಖಲೆ ಬರೆದಿದೆ.
ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ
ಅತ್ಯುತ್ತಮ ಚಿತ್ರ – ಕೊಡ
ಅತ್ಯುತ್ತಮ ನಟಿ – ದಿ ಐಸ್ ಆಫ್ ಟಮ್ಮಿ ಫಾಯೆ ಚಿತ್ರಕ್ಕಾಗಿ ಜೆಸ್ಸಿಕಾ ಚಸ್ಟೈನ್
ಅತ್ಯುತ್ತಮ ನಟ – ಕಿಂಗ್ ರಿಚರ್ಡ್ ಸಿನಿಮಾಗಾಗಿ ವಿಲ್ ಸ್ಮಿತ್
ಅತ್ಯುತ್ತಮ ನಿರ್ದೇಶಕ – ಪವರ್ ಆಫ್ ದಿ ಡಾಗ್‌ಗಾಗಿ ಜೇನ್ ಕ್ಯಾಂಪಿಯನ್
ಅತ್ಯುತ್ತಮ ಸಾಕ್ಷ್ಯಚಿತ್ರ – ಸಮ್ಮರ್ ಆಫ್ ಸೋಲ್
ಅತ್ಯುತ್ತಮ ಮೂಲ ಗೀತೆ – ಜೇಮ್ಸ್ ಬಾಂಡ್ ಅವರ ನೋ ಟೈಮ್ ಟು ಡೈಗಾಗಿ ಬಿಲ್ಲಿ ಎಲಿಶ್
ಅಭಿಮಾನಿಗಳ ಆಯ್ಕೆ ಪ್ರಶಸ್ತಿ – ಆರ್ಮಿ ಆಫ್ ದಿ ಡೆಡ್
ಅತ್ಯುತ್ತಮ ಅಡಾಪ್ಟೆಡ್ ಚಿತ್ರಕಥೆ – ಕೊಡಾ ಚಿತ್ರಕ್ಕಾಗಿ ಸೀನ್ ಹೈಡರ್
ಅತ್ಯುತ್ತಮ ಮೂಲ ಚಿತ್ರಕಥೆ – ಬೆಲ್‌ಫಾಸ್ಟ್‌ಗಾಗಿ ಕೆನ್ನೆತ್ ಬ್ರನಾಗ್
ಲೈವ್ ಆಕ್ಷನ್ ಕಿರುಚಿತ್ರ – ದಿ ಲಾಂಗ್ ಗುಡ್‌ಬೈ
ಅತ್ಯುತ್ತಮ ವಸ್ತ್ರ ವಿನ್ಯಾಸ – ಜೆನ್ನಿ ಬೀವನ್
ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ – ಡ್ರೈವ್ ಮೈ ಕಾರ್
ಅತ್ಯುತ್ತಮ ಪೋಷಕ ನಟ – ಕೊಡ ಸಿನಿಮಾಗಾಗಿ ಟ್ರಾಯ್ ಕೋಟ್ಸೂರ್
ಅತ್ಯುತ್ತಮ ಅನಿಮೇಟೆಡ್ ವೈಶಿಷ್ಟ್ಯ – ಎನ್ಕಾಂಟೊ
ಅತ್ಯುತ್ತಮ ಪೋಷಕ ನಟಿ – ವೆಸ್ಟ್ ಸೈಡ್ ಸ್ಟೋರಿಗಾಗಿ ಅರಿಯಾನಾ ಡಿಬೋಸ್
ಡ್ಯೂನ್ ಚಿತ್ರ ಒಟ್ಟು ಆರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಡ್ಯೂನ್ ಚಿತ್ರಕ್ಕಾಗಿ ಗ್ರೆಗ್ ಫ್ರೇಸರ್ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದರು.
ಅತ್ಯುತ್ತಮ ಚಲನಚಿತ್ರ ಸಂಕಲನ
ಅತ್ಯುತ್ತಮ ಮೂಲ ಸ್ಕೋರ್
ಅತ್ಯುತ್ತಮ ಉತ್ಪಾದನಾ ವಿನ್ಯಾಸ
ಅತ್ಯುತ್ತಮ ಧ್ವನಿ
ಅತ್ಯುತ್ತಮ ದೃಶ್ಯ ಪರಿಣಾಮ
ಅತ್ಯುತ್ತಮ ಛಾಯಾಗ್ರಹಣ