ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚಾರಣಿಗರ ಪಾಲಿನ ಹಾಟ್ ಸ್ಪಾಟ್… ಭೂಲೋಕದ ಸ್ವರ್ಗ ಕೊಡಚಾದ್ರಿ ..!

admin by admin
October 2, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ದೇಶ ಸುತ್ತು ಕೋಶ ಓದು ಅನ್ನೋ ಗಾದೆ ಮಾತಿದೆ.. ಅದರಂತೆ ಭಾರತದ ಭೂಗರ್ಭದಲ್ಲಿ ನಿಬ್ಬೆರಗಾಗಿಸುವಂತಹ ಪ್ರವಾಸಿ ತಾಣಗಳಿವೆ.. ಆದ್ರೆ ನಾವು ದೇಶ ಸುತ್ತುವುದಕ್ಕೂ ಮೊದಲು ನಮ್ಮ ಕರ್ನಾಟಕದಲ್ಲಿಯೇ ಇರುವಂತಹ ಐತಿಹಾಸಿಕ , ಪ್ರವಾಸಿ ತಾಣಗಳಿಗೆ ಮೊದಲು ವಿಸಿಟ್ ಮಾಡ್ಲೇ ಬೇಕು.. ಕರ್ನಾಟಕದ ನೆಲದಲ್ಲಿಯೇ ಸಾವಿರಾರು ಪ್ರವಾಸಿತಾಣಗಳು ದೇಶೀ ಪ್ರವಾಸಿಗರ ಜೊತೆಗೆ ವಿದೇಶಿ ಪ್ರವಾಸಿಗರ ಸೆರಳೆಯುತ್ತವೆ.. ಇನ್ನೂ ಪ್ರವಾಸದ ಜೊತೆಗೆ ಯುವಕರು ಹಾಗೂ ಹಿರಿಯರಿಗೂ ಟ್ರಕಿಂಗ್ ಕ್ರೇಜ್ ಅಂತೂ ಇದ್ದೇ ಇರುತ್ತೆ..

kodachadri, shimogga
kodachadri, shimogga

ಚಾರಣಿಗರ ಹಾಟ್ ಸ್ಪಾಟ್ ಭೂಲೋಕದ ಸ್ವರ್ಗ , ಟ್ರಕಿಂಗ್ ಪ್ರಿಯರ ಹಾಟ್ ಫೇವರೇಟ್ ತಾಣ ಅಂದ್ರೆ ಅದು ನಮ್ಮ ಮಲೆನಾಡು ಶಿವಮೊಗ್ಗದಲ್ಲೇ ಇರುವ ಕೊಡಚಾದ್ರಿ ಬೆಟ್ಟ…

Related posts

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026
ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

August 9, 2026

ಭೂಲೋಕದ ಸ್ವರ್ಗ ಕೊಡಚಾದ್ರಿ… ಇದು  ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ.. ಮೂಕಾಂಬಿಕಾ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಬೆಟ್ಟ ಸಾಲುಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ, ನಾಲ್ಕೂದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ. ಸಹ್ಯಾದ್ರಿಯ ವಿಶಿಷ್ಟ ನಿತ್ಯ ಹರಿದ್ವರ್ಣ ಅರಣ್ಯದ ನಟ್ಟ ನಡುವೆ ಇರುವ ಕೊಡಚಾದ್ರಿ ಬೆಟ್ಟ ಸಾಲುಗಳು ಚಾರಣಿಗರ ತವರೂರು ಎಂದರೇ ತಪ್ಪಾಗಲಾರದು.

ಉದ್ಯಮಿಗಳಿಗೇ ಸಾಲ ಕೊಟ್ಟವ್ರಂತೆ: ಸಂಜನಾ ಅಲ್ಲ ಬಡ್ಡಿ ಬಂಗಾರಮ್ಮ..!!

ಇನ್ನು ಕೊಡಚಾದ್ರಿಯಲ್ಲಿ ನಿಂತು ಸೂರ್ಯಾಸ್ತ ನೋಡುವುದೇ ಕಣ್ಣಿಗೆ ಹಬ್ಬ.. ನೀವು ಪ್ರಕೃತಿ ಪ್ರಿಯರು, ಪ್ರವಾಸದ ಕ್ರೇಜ್ ಜೊತೆಗೆ ಟ್ರಕ್ಕಿಂಗ್ ಹವ್ಯಾಸವಿದ್ರೆ ಒಮ್ಮೆ ನೀವು ಕೊಡಚಾದ್ರಿಗೆ ವಿಸಿಟ್ ಮಾಡ್ಲೇ ಬೇಕು.. ಆದ್ರೆ ಕೊಡಚಾದ್ರಿಯಲ್ಲಿ ಟ್ರಕಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ.. ಗಟ್ಟಿ ಗುಂಡಿಗೆ ಇರಬೇಕು.. ಕೊಡಚಾದ್ರಿ ಬೆಟ್ಟವನ್ನು ತಲುಪಲು ತೀರ ಕಡಿದಾದ,ಕಚ್ಚಾ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದರೆ ಸುತ್ತಲೂ ಪ್ರಪಾತ ಬೆಚ್ಚಿ ಬೀಳಿಸುತ್ತೆ..

ಕೊಡಚಾದ್ರಿಗೆ ಹೋಗುವುದು ಹೇಗೆ..?

ಕೊಲ್ಲೂರಿನಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಜೀಪ್ ಸರ್ವಿಸ್ ಇದೆ.. ಚಾರಣ ಮಾಡಲು ಬಯಸುವವರು ಉಡುಪಿ-ಶಿವಮೊಗ್ಗ ಗಡಿಯಲ್ಲಿ ಇರುವ ನಾಗೋಡಿ ಅರಣ್ಯ ತಪಾಸಣಾ ಕೇಂದ್ರದಿಂದ ಸ್ವಲ್ಪ ಮುಂದೆ ಹೋಗಿ ಎಡಕ್ಕೆ ತಿರುಗಿ ಸುಮಾರು ೪ ಕಿ.ಮೀ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಸಿಗುವ ಕೊನೆಯ ಮನೆಯ ಬಳಿಯಿಂದ ಚಾರಣ ಮಾಡಬಹುದು.

ಕೊಡಚಾದ್ರಿಯಲ್ಲಿ ನೊಡಬಹುದಾದ ತಾಣಗಳು

ಈ ಸ್ಥಳ ಚಾರಣಪ್ರಿಯರಿಗಷ್ಟೇ ಫೇವರೇಟ್ ಅಲ್ಲ.. ಕರ್ನಾಟಕ ಮಾತ್ರವಲ್ಲ ಭಾರತದ ಪ್ರಮುಖ ಪ್ರಾವಾಸಿತಾಣಗಳಲ್ಲಿ ಒಂದು..  ಪ್ರಕೃತಿಯ ಅತ್ಯಂತ ರಮಣೀಯ ನೋಟವನ್ನ ಕಣ್ತುಂಬಿಕೊಳ್ಳುವ ಪ್ರವಾಸಿಗರಿಗೆ ಇಲ್ಲಿ ಇನ್ನೂ ಹಲವಾರು ತಾಣಗಳು ನೋಡಲಿಕ್ಕೆ ಸಿಗುತ್ವೆ. ನೀವು ಕೊಡಚಾದ್ರಿಯಲ್ಲಿ   ಅರಿಶಿಣ ಗುಂಡಿ ಜಲಾಪಾತಕ್ಕೆ ಹೋಗಿ ಫ್ಯಾಮಿಲಿ ಫ್ರೆಂಡ್ಸ್ ಜೊತೆಗೆ ಎಂಜಾಯ್ ಮಾಡ್ಬೋದು.. ಅಗಸ್ತ್ಯ ತೀರ್ಥದಲ್ಲಿ ಸಮಯ ಕಳೆಯಬಹುದು.. ಇನ್ನೂ ಬೆಟ್ಟದ ಮೇಲೆ ಸರ್ವಜ್ಞ ಪೀಠಕ್ಕೆ ವಿಸಿಟ್ ಮಾಡಬಹುದು, ಅಲ್ಲಿಯೇ ಸಮೀಪದಲ್ಲೇ ಸಿಗುವ ವೆಂಕಟರಾಯನ ದುರ್ಗಕ್ಕೂ ಭೇಟಿ ಮಾಡಿ ಟ್ರಿಪ್ ಎಂಜಾಯ್ ಮಾಡಬಹುದು.. ಅಲ್ಲೇ ಸಿಗುವ ಹಿತ್ತಲಮನೆ ಜಲಪಾತಕ್ಕಂತೂ ನೀವು ಮಿಸ್ ಮಾಡ್ದೇ ವಿಸಿಟ್ ಮಾಡ್ಲೇ ಬೇಕು..

ಮಳೆಗಾಲದಲ್ಲಿ ಕೊಡಚಾದ್ರಿ ಪ್ರವಾಸವೇ ದೊಡ್ಡ ಸಾವಾಲು

ಹೇಳಿಕೇಳಿ ಭಾರತದ ಅತಿ ಹೆಚ್ಚು ಮಳೆ ಬೀಳುವ ಬೆಟ್ಟ ಕೊಡಚಾದ್ರಿ. ಅಲ್ಲಿಗೆ ಮಳೆಗಾಲದಲ್ಲಿ ಪಯಾಣಿಸುವುದು ಕಷ್ಟವೇ ಆದರೂ ಮಳೆಯಲ್ಲಿ ಪ್ರಕೃತಿಯ ಸೌಂದರ್ಯ  ಇಮ್ಮಡಿಯಾಗಿರುವ ದೃಶ್ಯ ಕಣ್ತುಂಬಿಕೊಳ್ಳುವುದು ಒಂದು ಅದೃಷ್ಟವೇ ಸರಿ..

ಕೊಡಚಾದ್ರಿಗೆ ತೆರಳಲು ನಿಜವಾಗಲೂ ಸವಾಲೊಡ್ಡುವ ಸಮಯವೆಂದರೆ ಮಳೆಗಾಲ. ಈ ಸಂದರ್ಭದಲ್ಲಿ ರಸ್ತೆಗಳು ತೇವಭರಿತವಾಗಿದ್ದು ಜಾರುತ್ತಿರುತ್ತವೆ. ತೆರಳಲೇಬೇಕೆಂದಿದ್ದರೆ ಸಾಕಷ್ಟು ಜಾಗರೂಕತೆ ವಹಿಸುವುದು ಅತ್ಯವಶ್ಯಕವಾಗಿದೆ. ವರ್ಷದ ಸುಮಾರು 8 ರಿಂದ 9 ತಿಂಗಳುಗಳ ಕಾಲ ಇಲ್ಲಿ ಮಳೆ ಸುರಿಯುತ್ತಿರುತ್ತದೆ.

ಆದರೆ ಮಳೆಗಾಲದಲ್ಲಿ ಕೊಡಚಾದ್ರಿಯು ಧರೆಗಿಳಿದ ಅಪ್ಸರೆಯಂತೆ ಕಾಣಿಸುತ್ತೆ. ಮಂಜು ಮುಸುಕಿನ ವಾತಾವರಣ, ತಂಪು ತಂಪಾದ ಪರಿಸರ, ಎಲ್ಲೆಲ್ಲೂ ಹಸಿರು, ತಾಜಾ ನೀರಿನ ಕೆರೆ ತೊರೆಗಳು, ನಗರದ ಗೌಜು ಗದ್ದಲಗಳಿಲ್ಲದ ಶಾಂತತೆ ಎಲ್ಲವೂ ಸೇರಿ ಇದನ್ನು ಒಂದು ಭುವಿಯ ಸ್ವರ್ಗದ ಹಾಗೆ ಕಾಣುತ್ತೆ.

ಸಮುದ್ರ ಮಟ್ಟದಿಂದ ಸುಮಾರು 1343 ಮೀ ಗಳಷ್ಟು ಎತ್ತರದಲ್ಲಿರುವ ಕೊಡಚಾದ್ರಿಗೆ ಕರ್ನಾಟಕ ಸರ್ಕಾರದಿಂದ ಪಾರಂಪರಿಕ ನೈಸರ್ಗಿಕ ಸ್ಥಳದ ಮಾನ್ಯತೆ ಸಿಕ್ಕಿದೆ. ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದ ಮಧ್ಯದಲ್ಲಿ ಸ್ಥಿತವಿರುವ ಕೊಡಚಾದ್ರಿಯು ಜೀವ ವೈವಿಧ್ಯತೆಯ ತಾಣವಾಗಿದ್ದು, ಹಲವು ಬಗೆಯ ಸ್ಥಳೀಯ ಹಾಗೂ ಅಳಿವಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಪತ್ತುಗಳಿಗೆ ಆಶ್ರಯ ತಾಣವಾಗಿದೆ. ಕೊಡಚಾದ್ರಿ ಶಿಖರ ತುದಿಯು ಬರಡು ನೆಲವಾಗಿದ್ದು ಅಷ್ಟೊಂದು ಗಿಡ ಮರಗಳನ್ನು ಇಲ್ಲಿ ಕಾಣಬಹುದು. ಬೆಟ್ಟದ ಸುತ್ತ ಕಾಡು ಪರಿಸರ, ಪ್ರಪಾತವನ್ನ ನೋಡಿದಾಗ ರೋಮಾಂಚನ ಆಗದೆ ಇರಲಾರದು.

ಕೊಡಚಾದ್ರಿಯ ಶಿಖರ ಪ್ರದೇಶದಲ್ಲಿ ಮೂಕಾಂಬಿಕೆ ದೇವಿಗೆ ಮುಡಿಪಾದ ಒಂದು ಪುರಾತನ ದೇಗುಲವನ್ನು ಕಾಣಬಹುದಾಗಿದ್ದು, ಇದು ಅಂದು ದೇವಿಯು ಮೂಕಾಸುರನ ವಧಿಸಿದ ಸ್ಥಳದಲ್ಲಿಯೆ ನಿರ್ಮಾಣವಾಗಿದ್ದೆಂದು ಹೇಳಲಾಗುತ್ತದೆ. ಹಾಗಾಗಿ ಇದು ಧಾರ್ಮಿಕ ದೃಷ್ಟಿಯಿಂದಲೂ ಮನ್ನಣೆಗಳಿಸಿದೆ.

ಐತಿಹಾಸಿಕ ಏಕಶಿಲಾ ರಚನೆಗಳು

ಐತಿಹಾಸಿಕವಾಗಿಯೂ ಮನ್ನಣೆ ಪಡೆದುಕೊಂಡಿರುವ  ಕೊಡಚಾದ್ರಿಯಲ್ಲಿ ಇಂದಿಗೂ ಸಹ ಹಲವು ಪುರಾತನ ಕಾಲದಲ್ಲಿ ನಿರ್ಮಿಸಲಾದ ಏಕಶಿಲಾ ರಚನೆಗಳು ನೋಡಲು ಸಿಗುತ್ತವೆ.  ಇಂದಿಗೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು , ದೇಸಿ ಹಾಗೂ ವಿದೇಶಿ ಪ್ರವಾಸಿಗರು ಕೊಡಚಾದ್ರಿಗೆ ವಿಸಿಟ್ ಮಾಡ್ತಾರೆ. ಇನ್ನೂ ಬೆಟ್ಟದ ತುತ್ತ ತುದಿಗಳ ಮೇಲೆ ನಿಂತರೇ ಸುತ್ತಲಿನ ಪ್ರಕೃತಿಯ ಮೋಹಕ ನೋಟ ಎಂಥವರನ್ನೂ ಸಮ್ಮೋಹಿಸುತ್ತೆ.   ಈ ಶಿಖರದಲ್ಲಿ ಆದಿ ಶಂಕರಾಚಾರ್ಯರು ಭೇಟಿ ನೀಡಿ ಕೆಲ ಸಮಯ ಧ್ಯಾನಿಸಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಕುರುಹು ಎಂಬಂತೆ ಶಿಲೆಯ ಒಂದು ಪುಟ್ಟ ದೇಗುಲವಾದ ಸರ್ವಜ್ಞ ಪೀಠವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ಆದಿ ಶಂಕರರಿಗೆ ಇದು ಮುಡಿಪಾಗಿದೆ.

ತಂಗುವ ವ್ಯವಸ್ಥೆ :

ಇನ್ನೂ ನೀವು ಕೊಡಚಾದ್ರಿಗೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ಅಲ್ಲಿಂದ ವಾಪಸ್ಸಾಗುವುದು ಅಸಾಧ್ಯವೇ.. ಹೀಗಾಗಿ ನೀವು ಅಲ್ಲಿ ತಂಗಲೇಬೇಕಾಗುತ್ತೆ.. ಸುತ್ತಲೂ ದೂರದಲ್ಲಿ ಖಾಸಗಿ ಲಾಡ್ಜ್ ಗಳು ಇವೆ.. ಆದರೆ ನೀವು ಚಾರಣಕ್ಕೆಂದು ಹೊರಟಾಗ ಕತ್ತಲಾಗ್ತಿದ್ದಂತೆ ಬೆಟ್ಟದ ಮಧ್ಯೆಯೇ ತಂಗುವುದಕ್ಕೆ ವ್ಯವಸ್ಥೆ ಇದೆ.. ಮೂಲ ಮೂಕಾಂಬಿಕಾ ದೇಗುಲದ ಬಳಿ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಥಿತಿ ಗೃಹವಿದೆ. ಇಲ್ಲಿ ಚಾರಣಿಗರು ತಂಗಬಹುದು. ಆದರೆ ಅದಕ್ಕೂ ಮುನ್ನ ಅನುಮತಿ ಪಡೆಯುವುದು ಕಡ್ಡಾಯ.. ಇನ್ನೂ ಪ್ರವಾಸಿಗರಿಗಾಗಿ ಮೂಕಾಂಬಿಕಾ ದೇವಸ್ತಾನದ ಅರ್ಚಕರ ಮನೆಗಳಲ್ಲಿ ಊಟ ಮತ್ತು ಉಳಿಯಲು ಅನುಕೂಲವಿದೆ.

Tags: kodachadrikolluru mukambika templeshimoggatruckking place
ShareTweetSendShare
Join us on:

Related Posts

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

by Shwetha
August 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ಬಿರುಸಾಗಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ರಾಜಕೀಯವಾಗಿ ಎತ್ತರಕ್ಕೆ ಬೆಳೆಯುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram