ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊಡಗಿನ ಪಟ್ಲಬೆಟ್ಟದ ಪ್ರಕೃತಿ ವೈಭವ; ಪ್ರವಾಸಿಗರಿಗೆ ಕಿಡಿಗೇಡಿಗಳ ನಿತ್ಯ ಕಾಟ..!

Kariyappa N by Kariyappa N
October 25, 2020
in Newsbeat, Samagra karnataka, ಎಸ್ ಸ್ಪೆಷಲ್, ರಾಜ್ಯ
patla
Share on FacebookShare on TwitterShare on WhatsappShare on Telegram

ಕೊಡಗು: ಅಕ್ಟೋಬರ್ ತಿಂಗಳ ಅಂತ್ಯ ಬಂದರೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಶ್ಚಿಮಘಟ್ಟದ ಗಿರಿಶಿಖರಗಳು ಹಚ್ಚ-ಹಸುರಿನಿಂದ ಕೂಡಿದ್ದು ಕೋವಿಡ್ ಸಂರ್ಭದಲ್ಲಿ ಮನೆಯ ಗೂಡಿನಲ್ಲಿ ಬೆಚ್ಚಗೆ ಕುಳಿತಿದ್ದ ಮಂದಿಗೆ ಪ್ರಕೃತಿಯ ಸೌಂದರ್ಯ ಕೈಬೀಸಿ ಕರೆಯುತ್ತಿದೆ.
ಇಂತಹ ಅಪರೂಪದ ಸ್ಥಳ ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ನಿಸರ್ಗ ರಮಣೀಯ ತಾಣ ಪಟ್ಲ ಬೆಟ್ಟ. ಈ ಪ್ರದೇಶ ಸಕಲೇಶಪುರ ತಾಲ್ಲೂಕಿಗೆ ಸೇರಿದೆಯಾದರು, ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಭೇಟಿ ನೀಡುವ ಪ್ರವಾಸಿಗರು ಪಟ್ಲ ಬೆಟ್ಟಕ್ಕೂ ಭೇಟಿ ನೀಡುತ್ತಾರೆ.
ವನಗೂರು ಮಾರ್ಗವಾಗಿ ಬಿಸಿಲೆ ಘಾಟ್ ಮೂಲಕ ಕೇವಲ 9 ಕಿಲೋಮೀಟರ್ ಬಂದರೆ ಸಾಕು ಪಟ್ಲಬೆಟ್ಟದ ತಪ್ಪಲಿಗೆ ತಲುಪಬಹುದು. ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವ ಪ್ರದೇಶ ಚಾರಣಿಗರಿಗೆ ಹೇಳಿ ಮಾಡಿಹಿದಂತ ತಾಣ. ಆದರೆ, ಸೂಕ್ತ ರಸ್ತೆಯಿಲ್ಲದೆ ನಮ್ಮ ಮಾಂದಲ್ಪಟ್ಟಿಯಂತೆ ಜೀಪುಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆಯಿದೆ.

patla betta1
ಬೆಟ್ಟದ ತುತ್ತ ತುದಿಗೆ ತಲುಪುತ್ತಿದ್ದಂತೆ ಮೂರು ಜಿಲ್ಲೆಗಳಿಗೆ ಸೇರುವ ಪಶ್ಚಿಮಘಟ್ಟದ ದೂರದಲ್ಲಿ ಕಾಣಸಿಗುವ ಜಲಧಾರೆಗಳು, ಮಂಜು ಮಳೆಯ ಚೆಲ್ಲಾಟ, ಚುಮುಚುಮು ಚಳಿ ಒಂದಷ್ಟು ರಿಲ್ಯಾಕ್ಷ್ ಮಾಡುವುದಂತೂ ಸತ್ಯ.

Related posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

October 5, 2026
jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

October 5, 2026

ಕಾಯುತ್ತಿರುತ್ತಾರೆ ಕಿಡಿಗೇಡಿಗಳು..!
ಇಲ್ಲಿಗೆ ನಮ್ಮ ಸ್ವಂತ ವಾಹನದಲ್ಲಿ ತೆರಳಿದರೆ ಪ್ರಕೃತಿ ವೀಕ್ಷಣೆ ಮಾಡಬೇಕು. ಅಂದರೆ ಜೀಪುಗಳನ್ನು ಅನಿವಾರ್ಯವಾಗಿ ಅವಲಂಭಿಸಬೇಕು. ಕೆಲವರು ತಮ್ಮದೇ ಜೀಪು, ಎಸ್‌ಯುವಿಗಳಲ್ಲಿ ಸಾಹಸ ಮಾಡಿದರೆ ಪುಟ್ಟ ಕಾರುಗಳಲ್ಲಿ ಬರುವವರು ಬಾಡಿಗೆ ಜೀಪು ಪಡೆದು ತೆರಳುತ್ತಾರೆ.

betta
ಹೀಗೆ ಮೂದಲೇ ವರ್ಣಿಸಿದ ಎಲ್ಲಾ ಸಂತೋಷ ಸಿಕ್ಕಿ ವಾಪಸ್ಸಾಗುತ್ತಿದ್ದಂತೆ ಇದ್ದ ಸಂತೋಷವೆಲ್ಲ ಇಳಿದೆ ಹೋಗುವುದಂತೂ ಸತ್ಯ. ತಪ್ಪಲಿನಲ್ಲಿ ಸ್ವಂತ ವಾಹನ ನಿಲ್ಲಿಸಿ ಹೋದರೆ ಬರುವಷ್ಟರಲ್ಲಿ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿರುತ್ತಾರೆ. ವಾಹನಗಳಿಗೆ ಹಾನಿ ಮಾಡುವುದು, ಪಂಚರ್ ಮಾಡುವುದು, ಸರ್ವೇ ಸಾಮಾನ್ಯವಾಗಿದೆ. ಕಚ್ಚಾ ರಸ್ತೆಯಿಂದ ಕೆಲವು ವೇಳೆ ಪಂಚರ್ ಆಗುವುದು ಸಹಜ. ಆದರೆ ಎಲ್ಲಾ ವಾಹನಗಳಿಗೂ ಇದೇ ಗತಿಯಾಗಿರುತ್ತದೆ.

ಕೊಡಗಿನ ಪಟ್ಲಬೆಟ್ಟದ ಪ್ರಕೃತಿ ವೈಭವ; ಪ್ರವಾಸಿಗರಿಗೆ ಕಿಡಿಗೇಡಿಗಳ ನಿತ್ಯ ಕಾಟ..!
ಕಾರುಗಳಿಗೆ ಬದಲಿ ಚಕ್ರಗಳಿರುತ್ತದೆ, ಒಂದು ವೇಳೆ ಎರಡು ಚಕ್ರಗಳೂ ಪಂಚರ್ ಆದರೆ ಗತಿಯೇನು. ಇನ್ನು ದ್ವಿಚಕ್ರವಾಹನದವರ ಪಾಡು ಹೇಳತೀರದು. ಹೀಗೆ ಪಂಚರ್ ಸರಿ ಪಡಿಸಲು 18 ಕಿಲೋಮೀಟರ್ ನಲ್ಲಿರುವ ಹೆತ್ತೂರು ಇಲ್ಲವೇ, 52 ಕಿಲೋ ಮೀಟರ್ ದೂರದ ಸಕಲೇಶಪುರಕ್ಕೆ ಬಾಡಿಗೆ ವಾಹನ ಹುಡುಕಿ ಹೋಗಿ ರಿಪೇರಿ ಮಾಡಿಸಿಕೊಂಡು ಬರಬೇಕಾಗುತ್ತದೆ.


ಸದಾ ಮಳೆಗಾಳಿ ಇರುವುದರಿಂದ ಈ ಪ್ರದೇಶದಲ್ಲಿ ರಿಪೇರಿ ಕೆಲಸ ಮುಗಿಸಿಕೊಂಡು ಬರುವವರೆಗೆ ಕುಟುಂಬದವರು ವಾಹನದಲ್ಲೇ ಕುಳಿತಿರಬೇಕಾಗುತ್ತದೆ. ಶೌಚಾಲಯವಾಗಲಿ, ಕುಡಿಯುವ ನೀರಾಗಲಿ, ಕನಿಷ್ಟ ಒಂದು ಅಂಗಡಿಯಾಗಲಿ ಇಲ್ಲ. ಇದರ ನಡುವೆ ಪಡ್ಡೆ ಹುಡುಗರ ಗುಂಡು ತುಂಡು ಪಾರ್ಟಿ, ಅವುಗಳ ಅವಶೇಷಗಳನ್ನು ನೋಡಿಯೇ ಹೆಂಗಸರು-ಮಕ್ಕಳು ಭಯಭೀತರಾಗುವುದಂತೂ ಸತ್ಯ.
ಸದ್ಯ ಪ್ರವಾಸಿಗರ ಸಂಖ್ಯೆ ಇತ್ತಕಡೆ ಭೇಟಿ ನೀಡುವುದು ಹೆಚ್ಚಾಗುತ್ತಿದೆ. ಕನಿಷ್ಟಪಕ್ಷ ಕಿಡಿಗೇಡಿಗಳ ಕಾಟ ತಪ್ಪಿಸಲು ಪೋಲಿಸರನ್ನು ಮತ್ತು ಮೂಲಭೂತ ಸೌಕರ್ಯ ಒದಗಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕಿದೆ.

ವರದಿ: ಗಿರಿಧರ್ ಕೊಂಪುಳೀರ

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: KODAGUmiscrientsnatural beautyPatla bettaTourist
ShareTweetSendShare
Join us on:

Related Posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

by admin
October 5, 2026
0

ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ಸ್ಟಾರ್ ನಿರ್ದೇಶಕ...

jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

by admin
October 5, 2026
0

* ಪ್ರೊ ಪಾಸ್ 48 ರೂ.ನಿಂದ ಪ್ರಾರಂಭ. ಜಿಯೋ ಬಳಕೆದಾರರಿಗೆ ಆಯ್ದ ಯೋಜನೆಗಳಲ್ಲಿ 100 ರೂ.ವರೆಗೆ ರಿಯಾಯಿತಿ * ಪ್ರೀಮಿಯಂ ಕ್ರಿಕೆಟ್ ಆಟಗಳನ್ನು ಕ್ಲೌಡ್‌ನಿಂದ ಸ್ಟ್ರೀಮ್ ಮಾಡಲಾಗುತ್ತದೆ...

india-singles-loneliness-survey-dating-apps-real-life-connections

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

by admin
October 5, 2026
0

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ...

swiggy-dineout-great-indian-ravi-festival-50-percent-discount

ʼಡಿಸ್ಕೌಂಟ್ ಫಾಲೋಸ್ ಮೈ ಬ್ರದರ್..!ʼ: ಸ್ವಿಗ್ಗಿ ಡೈನ್‌ಔಟ್‌ನಿಂದ ಹೋಟೆಲ್ ಊಟದ ಮೇಲೆ ಬರೋಬ್ಬರಿ 50% ಡಿಸ್ಕೌಂಟ್

by admin
October 5, 2026
0

ಹೊರಗಡೆ ಹೋಗಿ ರುಚಿಯಾದ ಊಟ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಂಥ ಭೋಜನ ಪ್ರಿಯರಿಗೆ ಸ್ವಿಗ್ಗಿ ಡೈನ್‌ಔಟ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಸ್ವಿಗ್ಗಿಯ...

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

by admin
October 5, 2026
0

ಬೆಂಗಳೂರು: ಗಾಯಕ್ಕೆ ಚಿಕಿತ್ಸೆ ನೀಡಿ ಚೇತರಿಕೆಗೊಳಿಸುವುದರಲ್ಲೇ ಸೀಮಿತವಾಗದೆ, ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಪುನರ್‌ನಿರ್ಮಿಸಿ, ಶಕ್ತಿ ಹೆಚ್ಚಿಸಿ, ಕ್ರೀಡೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡುವ ಸಮಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram