ಸತ್ತು ಹೂಳಲ್ಪಟ್ಟವರು ವಿಷವಾಗಿ ಬರುತ್ತಾರೆ, ಮುಂದೆ ಭಯಾನಕ ರೋಗ ಬರಲಿದೆ : ಕೋಡಿ ಶ್ರೀ ಭವಿಷ್ಯ
ಹಾಸನ : ಕೊರೊನಾಗಿಂತಲೂ ಭಯಾನಕ ರೋಗ ಮುಂದೆ ಬರುತ್ತದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹಾಸನದ ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಕೊರೊನಾದಂತಹ ಮಾರಣಾಂತಿಕ ಕಾಯಿಲೆ ದೂರವಾಗಲು ಸುಮಾರು 10 ವರ್ಷಗಳೇ ಬೇಕು.
ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವವನ್ನು ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ.
ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಮುಂದೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಶಂಭುವಿನ ಪದಸಾಕ್ಷಿ ಡಂಬವೆನ್ನೆಲು ಬೇಡಿದೆನಾ ಎಂದರೆ, ಪ್ರಳಯದ ಮಳೆ ಆಗಲಿದೆ.
ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅಪಾಯಕಾರಿ ಘಟನೆಯೊಂದು ನಡೆಯಲಿದೆ. ಅಲ್ಲದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ.
ಇನ್ನು ಸತ್ತು ಹೂಳಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೀವು ನೋಡಬಹುದು, ಆದರೆ ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.