Kohinoor Diamond | ಭಾರತಕ್ಕೆ ವಾಪಸ್ ಆಗುತ್ತಾ ಕೊಹಿನೂರ್ ವಜ್ರ ? ಕಂಪ್ಲೀಟ್ ಇತಿಹಾಸ ಇಲ್ಲಿದೆ
ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ನಮ್ಮಿಂದ ಸರಿ ಸುಮಾರು 45 ಟ್ರಿಲಿಯನ್ ಡಾಲರ್ಸ್ ದೋಚಿಕೊಂಡು ಹೋದರು. ಅಂದರೇ ಇದು ಈಗಿರುವ ಬ್ರಿಟನ್ ಎಕೋನಾಮಿಗೆ 900 ಪರ್ಸೆಂಟ್ ಗೂ ಹೆಚ್ಚು. ಇದರಲ್ಲಿ ಕೊಹಿನೂರ್, ದ ರಿಂಗ್ ಆಫ್ ಟಿಪ್ಪು ಸುಲ್ತಾನ್, ವೈನ್ ಕಪ್ ಆಫ್ ಶಹಜಾನ್, ರೋಸ್ಟಾಸ್ಟೋನ್ ಇವೆ. ಇವುಗಳ ಜೊತೆಗೆ ಸಾಕಷ್ಟು ಬೆಲೆ ಬಾಳುವ ವಸ್ತುಗಳನ್ನು ಬ್ರಿಟಿಷರು ದೋಚಿದ್ದಾರೆ. ಇದೆಲ್ಲಾ ಈಗ ಏನಕ್ಕೆ ಅಂತಿರಾ?
ಇತ್ತೀಚೆಗೆ ಎಲಿಜಬೆತ್ ಕ್ವೀನ್ ಇಹಲೋಕ ತ್ಯಜಿಸಿದ್ದು, ಇಲ್ಲಿಯವರೆಗೂ ಅವರ ಕಿರೀಟದಲ್ಲಿದ್ದ ಕೊಹಿನೂರು ವಜ್ರವನ್ನು ನಮಗೆ ವಾಪಸ್ ಕೊಡುತ್ತಾರಾ ಎಂಬ ಚರ್ಚೆ ಸದ್ಯ ನಡೆಯುತ್ತಿದೆ. ಟ್ವಿಟ್ಟರ್ ನಲ್ಲೂ ಕೂಡ ಈ ಟಾಪಿಕ್ ಟ್ರೆಂಡ್ ಆಗುತ್ತಿದೆ.
ಅಸಲಿಗೆ ಈ ವಜ್ರ ಮೊದಲಿಗೆ ಸಿಕ್ಕಿದ್ದೇಲಿ ? ಈ ವ್ರಜ ಭದ್ರಕಾಳಿಯ ಕಣ್ಣು ಅಂತಾ ನಿಮ್ಮಲ್ಲಿ ಎಷ್ಟು ಮಂದಿಗೆ ಗೊತ್ತು ? ಅಷ್ಟು ಪವಿತ್ರವಾಗಿರುವ ಈ ವಜ್ರ ಹೇಗೆ ಬ್ರಿಟಿಷರ ಪಾಲಾಯ್ತು ? ನಾವು ನಿಜವಾಗಿಯೂ ಕೊಹಿನೂರ್ ವಜ್ರವನ್ನು ವಾಪಸ್ ತೆಗೆದುಕೊಳ್ಳಬಹುದಾ ?
ಈ ಕೊಹಿನೂರ್ ಡೈಮೆಂಡ್ ನಮ್ಮದೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಡೈಮೆಂಡ್ ಕಾಕತೀಯ ಪ್ರಾಂತ್ಯದ ಅಂದರೇ ಸದ್ಯದ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಮೈನಿಂಗ್ ನಲ್ಲಿ ಸಿಕ್ಕಿದ್ದು.

ನಂತರ ಈ ಪ್ರಾಂತ್ಯವನ್ನು ಪುಲಿಕೇಶಿಯನ್ 2 ಗೆದ್ದು, ಈ ಪ್ರಾಂತ್ಯದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ತನ್ನ ರಾಜ್ಯಕ್ಕೆ ಕೊಂಡ್ಯೊಯ್ದ. ಆದ್ರೆ ಈ ಕೊಹಿನೂರಕ್ಕೆ ಒಂದು ಶಾಪವಿದೆ. ಅದು ಏನಂದರೇ ಈ ವಜ್ರವನ್ನು ಯಾವ ಪುರುಷ ಧರಿಸುತ್ತಾನೋ ಆತನ ರಾಜ್ಯ ಅಥವಾ ಆತನ ವಂಶ ನಾಶವಾಗುತ್ತದೆ. ಈ ಶಾಪದ ಬಗ್ಗೆ ತಿಳಿದು ಪುಲಿಕೇಶಿಯನ್ 2 ಈ ವಜ್ರವನ್ನು ತಂದು ಈಗಿನ ವರಂಗಲ್ ನಲ್ಲಿ ಮಹಾಕಾಳಿ ದೇಗುಲ ಕಟ್ಟಿಸಿ ಆ ಮಹಾಕಾಳಿಯ ಎಡಗಣ್ಣಿಗೆ ಈ ವಜ್ರವನ್ನ ಇಟ್ಟಿದ್ದ.
ನಂತರ 1100 ಸಿ.ಇ ಟೈಮ್ ನಲ್ಲಿ ಕಾಕತೀಯ ಸಾಮ್ರಾಟರು ಪ್ರಾಂತ್ಯವನ್ನು ವಶ ಮಾಡಿಕೊಂಡು ಭದ್ರಕಾಳಿಯನ್ನು ತಮ್ಮ ಕುಲದೇವಿಯಾಗಿ ಪೂಜಿಸಿದರು.
ಅಮ್ಮನವರ ಎಡಗಣ್ಣು ಡೈಮೆಂಡ್ ಆಗಿರುವುದರಿಂದ ಬೆಳಕು ಆ ಕಣ್ಣಿನ ಮೇಲೆ ಬಿದ್ದರೇ ಪ್ರಕಾಶವಾದ ಬೆಳಕು ಬರುತ್ತಿತ್ತು. ಇದನ್ನು ನೋಡಲು ಸಾಕಷ್ಟು ಭಕ್ತರು ದೇಗುಲಕ್ಕೆ ಬರುತ್ತಿದ್ದರು. ಹೀಗಾಗಿ ಕಾಕತೀಯರು ಈ ದೇಗುಲಕ್ಕೆ ಭಾರಿ ಭದ್ರತೆ ಕೊಟ್ಟಿದ್ರು.
ಆದ್ರೆ ಕಾಕತೀಯ ಸಾಮ್ರಾಜ್ಯ ಕೊಂಚ ದುರ್ಬಲವಾಗಿದ್ದಾಗ 1300 ಸಿಇ ನಲ್ಲಿ ಅಲ್ಲಾವುದ್ದೀನ್ ಖಿಲ್ಜಿ 2 ದಾಳಿ ಮಾಡಿ ಕಾಕತೀಯರನ್ನ ಸೋಲಿಸಿದರು. ಅಲ್ಲದೇ ಈ ಭದ್ರಕಾಳಿ ದೇಗುಲವನ್ನು ನಾಶ ಮಾಡಿ ವಜ್ರವನ್ನು ತೆಗೆದುಕೊಂಡು ಹೋದ.
ಈ ಸಮಯದಲ್ಲಿ ವಜ್ರದ ಮೌಲ್ಯ 193 ಕ್ಯಾರೆಟ್ಸ್ ಇತ್ತು. ಅಂದರೇ 158.6 ಗ್ರಾಂ. ಇಂದಿನ ಮೌಲಕ್ಕೆ ಹೋಲಿಸಿದ್ರೆ 900 ಬಿಲಿಯನ್ ಡಾಲರ್ಸ್ ಅಂತಾ ಅಂದಾಜಿಸಲಾಗುತ್ತಿದೆ. ಆ ರೀತಿ ಡೆಲ್ಲಿ ಸುಲ್ತಾನರ ಕೈ ಹೋದ ಈ ಡೈಮೆಂಡ್ 1525 ರಲ್ಲಿ ಮೊಘಲ್ ಪಾಲಾಯ್ತು. ಆಗಲೇ ಎರಡನೇ ಬಾರಿಗೆ ಆ ವಜ್ರವನ್ನು ಸಾಮಾನ್ಯ ಜನರು ನೋಡುವಂತೆ ಆಯ್ತು, ಶಹಜಾನ್ ಅಧಿಕಾರಕ್ಕೆ ಬಂದಾಗ ತನ್ನ ನವಿಲಿನ ಸಿಂಹಾಸನದಲ್ಲಿ ಈ ವಜ್ರವನ್ನು ಇರಿಸಿಕೊಂಡಿದ್ದ.
ಆ ನಂತರ ಬಂದ ಔರಂಗಜೇಬ್ ಈ ವಜ್ರ ಸರಿಯಾಗಿ ಹೊಳೆಯುತ್ತಿಲ್ಲ ಅಂತಾ ಹೇಳಿ 793 ರಿಂದ 186 ಕ್ಯಾರೆಟ್ ಗೆ ಕಟ್ ಮಾಡಿಸಿದ. ನಂತರ 1739ರಲ್ಲಿ ಇರಾನಿನ ಶಾ ಕಿಂಗ್ ನಾದೆರ್ ಶಾ ನಾರ್ಥ್ ಇಂಡಿಯಾ ಮೇಲೆ ಯುದ್ಧ ಮಾಡಿ ಈ ವಜ್ರವನ್ನು ವಶಪಡಿಸಿಕೊಂಡ. ಆತನೇ ಈ ವಜ್ರಕ್ಕೆ ಕೊಹಿನೂರ್ ಅಂತಾ ಹೆಸರಿಟ್ಟಿದ್ದು. ಇದಕ್ಕೆ ಅರ್ಥ ಮೌಟೇನ್ ಆಫ್ ಲೈಟ್ ಎಂದು.

ಈ ವಜ್ರ ಕೈ ಬಂದ ಕೆಲವೇ ವರ್ಷಗಳಲ್ಲಿ ಶಾ ಕಿಂಗ್ ನಾದೆರ್ ಶಾ ರಾಜ್ಯವನ್ನು ಕಳೆದುಕೊಂಡು ಕೊನೆಯುಸಿರೆಳೆದ. ನಂತರ 1747ರಲ್ಲಿ ಕೊಹಿನೂರ್ ನಾದೆರ್ ಶಾ ಮೊಮ್ಮಗನ ಕೈಗೆ ಹೋಯ್ತು. ಆತ 1751 ರಲ್ಲಿ ಓಡಿ ಹೋಗಿ ಆಘ್ಪಾನಿಸ್ತಾನ್ ಅಹ್ಮದ್ ಶಾ ದುರ್ರಾನ್ ಬೆಂಬಲಕ್ಕಾಗಿ ಈ ವಜ್ರವನ್ನು ಉಡುಗೊರೆಯಾಗಿ ಕೊಟ್ಟ. ಇದಕ್ಕೆ ಬದಲಿಯಾಗಿ ತನ್ನವರನ್ನ ರಾಜ್ಯದಲ್ಲಿ ಸುರಕ್ಷತೆಯಾಗಿ ಇಟ್ಟುಕೊಳ್ಳಬೇಕು ಅಂತಾ ಮನವಿ ಮಾಡಿದ. ಇದಾದ ಬಳಿಕ ಈ ಕೊಹಿನೂರ್ ಶೂಜಾ ಶಾ ದುರ್ರಾನಿ ಬಳಿಗೆ ಬಂತು. ಆತ ರಾಜ್ಯದ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಫ್ಘಾನ್ ನಿಂದ ಓಡಿ ಹೋಗಿ ಲಾಹೋರ್ ಗೆ ಬಂದು ಸಿಖ್ ಎಂಪೈರ್ ರಂಜೀತ್ ಸಿಂಗ್ ಅವರ ಬಳಿ ತಲೆಮರೆಸಿಕೊಂಡು, ಆತನಿಗೆ ಕೊಹಿನೂರ್ ವಜ್ರವನ್ನ ಉಡುಗೊರೆಯಾಗಿ ಕೊಟ್ಟ.
ಹಾಗೇ ಕೊಹಿನೂರ್ ವಜ್ರ ಮತ್ತೆ ಭಾರತಕ್ಕೆ ವಾಪಸ್ ಆಯ್ತು. ಆಗ ರಂಜೀತ್ ಸಿಂಗ್ ಗೆ ಒಂದು ಅನುಮಾನ ಬಂತು. ಅದು ಏನಂದರೇ ಈ ವಜ್ರ ಇಷ್ಟು ಮಂದಿಯ ಕೈಗಳ ಸೇರಿ ಮತ್ತೆ ಭಾರತಕ್ಕೆ ವಾಪಸ್ ಹೇಗೆ ಬಂತು. ಅಷ್ಟಕ್ಕೂ ಇದರ ಮೌಲ್ಯವೆಷ್ಟು ಅಂತಾ ರಾಜ್ಯದಲ್ಲಿದ್ದ ವಜ್ರಗಳ ವ್ಯಾಪಾರಿಗಳನ್ನು ಕರೆದು ಈ ವಜ್ರವ ಮೌಲ್ಯವೆಷ್ಟು ಅಂತಾ ಪ್ರಶ್ನಿಸಿದ.
ಆಗ ವಜ್ರದ ವ್ಯಾಪಾರಗಳು ಈ ವಜ್ರಕ್ಕೆ ನಾವು ಬೆಲೆ ಕಟ್ಟೋಕೆ ಆಗುವುದಿಲ್ಲ. ಇದನ್ನ ತಿಳಿದ ರಂಜೀತ್ ಸಿಂಗ್ ಕೊಹಿನೂರ್ ವಜ್ರವನ್ನು ಎಚ್ಚರಿಕೆಯಿಂದ ಜೋಪಾನವಾಗಿ ಕೊಹಿನೂರ್ ವಜ್ರವನ್ನು ಕಾಪಿಟ್ಟುಕೊಂಡಿದ್ದ. ಕೇವಲ ದಸರಾ, ದೀಪಾವಳಿ ಸಂದರ್ಭಗಳಲ್ಲಿ ಮಾತ್ರ ಹೊರಗಡೆ ತೆಗೆಯುತ್ತಿದ್ದ. ಇದನ್ನ ಸಾಗಿಲು 30 ಕ್ಕೂ ಹೆಚ್ಚು ಒಂಟಿಗಳಿಗೆ ಒಂದೇ ತರಹದ ಬ್ಯಾಗ್ ಗಳನ್ನು ಕಟ್ಟಿ ಸಾಗಿಸುತ್ತಿದ್ರು. ಯಾಕೆಂದರೇ ಯಾವ ಬ್ಯಾಗ್ ನಲ್ಲಿ ವಜ್ರ ಇದೆ ಅನ್ನೋದು ಯಾರಿಗೂ ಗೊತ್ತಾಗಬಾರದು ಅನ್ನುವ ಕಾರಣಕ್ಕೆ. ಇದರ ಬಗ್ಗೆ ರಂಜೀತ್ ಸಿಂಗ್ ಮತ್ತು ಆತನ ಹಣಕಾಸಿನ ಸಚಿವ ಮಿಸರ್ ಬೆಲಿ ರಾಮ್ ಗೆ ಮಾತ್ರ ಈ ವಿಚಾರ ಗೊತ್ತಿತ್ತು.
ಆ ನಂತರ 1839ರಲ್ಲಿ ಸಾವಿನ ಅಂಚಿನಲ್ಲಿದ್ದ ರಂಜೀತ್ ಸಿಂಗ್, ಈ ಕೊಹಿನೂರ್ ಸೇರಿದಂತೆ ಇನ್ನಷ್ಟು ಆಭರಣಗಳನ್ನು ಪೂರಿ ಜಗನ್ನಾಥ್ ದೇವಾಲಯಕ್ಕೆ ಕೊಡುವಂತೆ ಆದೇಶಿಸಿದ್ದ. ಆದ್ರೆ ಹಣಕಾಸು ಸಚಿವ ರಾಮ್ ಗೆ ಈ ಡೈಮೆಂಡ್ ಬೆಲೆ ಗೊತ್ತಿತ್ತು ಅಲ್ವಾ, ಅದಕ್ಕಾಗಿ ಕೊಹಿನೂರ್ ವಜ್ರವನ್ನು ಹೊರತುಪಡಿಸಿ ಇನ್ನುಳಿದ ಆಭರಣಗಳನ್ನು ದೇಗುಲಕ್ಕೆ ಕೊಟ್ಟ.
1843ಯಲ್ಲಿ ಐದು ವರ್ಷದ ದುಲೀಪ್ ಸಿಂಗ್ ಅವರನ್ನ ರಾಜರನ್ನಾಗಿಸಿದ್ರು. ಹೀಗಿದ್ದಾಗ 1849ರಲ್ಲಿ ಲಾಹೋರ್ ನಲ್ಲಿ ಬ್ರಿಟಿಷರಿಗೆ ಈ ವಜ್ರವನ್ನು ಗಿಫ್ಟ್ ಆಗಿ ನೀಡಿದರು. ಆಗಲೇ ಈ ವಜ್ರ ಕ್ವೀನ್ ಕಿರೀಟ ಸೇರಿತು ಅಂತಾ ಇತಿಹಾಸಕಾರರು ಬರೆದಿದ್ದಾರೆ.

ಕೆಲವು ಇತಿಹಾಸಕಾರರ ಪ್ರಕಾರ ಸಿಖ್ ಸಾಮ್ರಾಜ್ಯದ ಮೇಲೆ ಬ್ರಿಟಿಷರು ದಾಳಿ ನಡೆಸಿದ್ದಾಗ ಮೊದಲ ಬಾರಿ ಸಿಖ್ ಸೇನೆ ಗೆದ್ದರೂ ಎರಡನೇ ಬಾರಿಗೆ ಸೋಲು ಕಂಡಿತ್ತಂತೆ. ಆಗ ದಿಲೀಪ್ ಸಿಂಗ್ ಅವರ ತಾಯಿಯನ್ನ ಬ್ರಿಟಿಷರು ಕಿಡ್ನಾಪ್ ಮಾಡಿದ್ದರಂತೆ. ಆಗ 11 ವರ್ಷದ ದಿಲೀಪ್ ಸಿಂಗ್ ಕೈಯಿಂದ ಪಂಜಾಬ್ ಮತ್ತು ಕೊಹಿನೂರ್ ವಜ್ರವನ್ನು ಬ್ರಿಟಿಷರಿಗೆ ನೀಡುತ್ತಿರುವುದಾಗಿ ಬರೆಸಿಕೊಂಡರಂತೆ. ಆ ರೀತಿ ಕೊಹಿನೂರ್ ವಜ್ರ ಬ್ರಿಟೀಷರ ಪಾಲಾಯ್ತು.

ಹಾಗಾದ್ರೆ ಕೊಹಿನೂರ್ ವಜ್ರ ಭಾರತಕ್ಕೆ ವಾಪಸ್ ಬರುತ್ತಾ ? ಅಂದ್ರೆ ಏನಾದ್ರೂ ಕಳ್ಳತನದಿಂದಾಗಿ ಅಥವಾ ಬಲವಂತವಾಗಿ ತೆಗೆದುಕೊಂಡು ಹೋದ ವಸ್ತುಗಳನ್ನು ಮಾತ್ರ ನಾವು ವಾಪಸ್ ಪಡೆಯಬಹುದು, ಕೊಹಿನೂರ್ ವಜ್ರವನ್ನು ನಮ್ಮ ರಾಜನೇ ಬ್ರಿಟಿಷರಿಗೆ ನೀಡಿರುವ ಕಾರಣ ಅದನ್ನ ನಾವು ಕಾನೂನಿನ ಪ್ರಕಾರ ವಾಪಸ್ ತೆಗೆದುಕೊಂಡು ಬರಲು ಸಾಧ್ಯವಿಲ್ಲ ಎಂದು ನಮ್ಮ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.








