ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಒಲ್ಲದ ಮನಸ್ಸಿನಿಂದಲೇ ಪ್ರೀತಿಯ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಡಿವೋರ್ಸ್..!

Kohli divorces his beloved Test cricket out of a reluctant mind..!

Shwetha by Shwetha
May 14, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ನಿನ್ನ ಹೆಸರು ಹೇಳಿದ ತಕ್ಷಣ… ನಿನ್ನ ಆಟದ ವೈಖರಿ ರಪ್ಪನೆ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ. ತಂಡದ ಗೆಲುವಿಗಾಗಿ ನೀನು ಹೋರಾಡುವ ರೀತಿಯಂತೂ ರೋಮಾಂಚನಗೊಳಿಸುತ್ತದೆ.

ಅದು ಶತಕದ ಸಂಭ್ರಮವೇ ಆಗಿರಲಿ, ಗೆಲುವಿನ ಖುಷಿಯೇ ಆಗಿರಲಿ..ಯಾವುದೇ ದಾಖಲೆಗಳೇ ಆಗಿರಲಿ..ನೀನಾಡುವ ಪರಿ ಪುಳಕಗೊಳ್ಳುವಂತೆ ಮಾಡುತ್ತದೆ.
ಅಷ್ಟೇ ಯಾಕೆ ಸಹ ಆಟಗಾರರ ಅದ್ಭುತ ಸಾಧನೆಯನ್ನು ಮನಸಾರೆ ಆಸ್ವಾದಿಸುವ ಗುಣ ನಿನ್ನ ಮೇಲಿನ ಅಭಿಮಾನವನ್ನು ಇಮ್ಮಡಿಗೊಳಿಸುತ್ತದೆ.ಪ್ರತಿ ಪಂದ್ಯವನ್ನು ಜಿದ್ದಿಗೆ ಬಿದ್ದಂತೆ ಆಡುವುದನ್ನು ನೋಡಿದಾಗ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.

Related posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

July 19, 2026
Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

July 19, 2026

ಏಟಿಗೆ ಏಟು..ಮಾತಿಗೆ ಮಾತು.. ಅಲ್ಲೆ ಡ್ರಾ ಅಲ್ಲೆ ಬಹುಮಾನ ಅನ್ನೋ ದಾದಾಗಿರಿಯ ಪ್ರವೃತ್ತಿ ಮೀತಿ ಮೀರುತ್ತಿದೆ ಎಂದು ಅನ್ನಿಸಿದ್ರೂ ಅದು ಇರಬೇಕು ಎಂದು ಅನ್ನಿಸುತ್ತಿದೆ.
ಟೀಮ್ ಇಂಡಿಯ ಟೆಸ್ಟ್ ತಂಡದ ಮನೋಭಾವನೆಯನ್ನೇ ಬದಲಾಯಿಸಿದ ಕ್ರಾಂತಿಕಾರಿ ನಾಯಕ ಎಂದು ಸಾರಿ ಸಾರಿ ಹೇಳಬೇಕಾಗುತ್ತದೆ.

ಸೂಜಿಗಲ್ಲಿನಂತೆ ಸೆಳೆಯುವ ನೋಟ..ಬೆಂಕಿಯಂತೆ ಕಾರುವ ದೃಷ್ಟಿ.. ದಿಟ್ಟ ಹೆಜ್ಜೆ…ಲಯಬದ್ಧವಾದ ಟೆಸ್ಟ್ ಕ್ರಿಕೆಟ್‍ನ ಶಾಸ್ತ್ರೀಯ ಆಟದ ಕಲೆ.. ಸೋಲಲೇ ಬಾರದು ಅನ್ನೋ ಹಠ..ಏಕಾಂಗಿಯಾಗಿ ಹೋರಾಟ ಮಾಡೋ ಛಲ..ತಂಡಕ್ಕಾಗಿ ಎಲ್ಲವನ್ನೂ ಸಮರ್ಪಣೆ ಮಾಡೋ ಪರಿಶ್ರಮ,ತ್ಯಾಗ..ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ

ಕ್ರಿಕೆಟ್ ಆಟದಲ್ಲಿ ಪ್ರಬುದ್ಧನಾದ್ರೂ ಚಿಕ್ಕ ಮಕ್ಕಳಂತೆ ಅಂಗಣದಲ್ಲಿ ಹಾರಾಡುತ್ತಾ,, ಕುಣಿಯುತ್ತಾ..ಆಟ-ಚೆಲ್ಲಾಟವಾಡುತ್ತಾ..ಹೀಗೆ ನಾನಾ ಚೇಷ್ಠೆಗಳನ್ನು ಮಾಡುತಾ.್ತ ಸಹ ಆಟಗಾರರನ್ನು ಹುರಿದುಂಬಿಸುತ್ತಾ..ಆಟವನ್ನು ಸೃಜಿಸುತ್ತಾ.. ಅಭಿಮಾನಿಗಳನ್ನು ರಂಜಿಸುತ್ತಾ ನಿನ್ನ ತಾಳ ಮೇಳವನ್ನು ಮತ್ತೆ ನೋಡಬೇಕು ಎಂದು ಎನಿಸುತ್ತಿದೆ.
36ರ ಹರೆಯದಲ್ಲೂ ಫಿಟ್ ಆಂಡ್ ಫೈನ್ ಆಗಿರುವ ನೀನು ಇನ್ನೂ ಮೂರು ನಾಲ್ಕು ವರ್ಷ ಟೆಸ್ಟ್ ಮ್ಯಾಚ್ ಆಡಬೇಕು ಎಂದು ಮನಸು ಹೇಳುತ್ತದೆ. ಆದ್ರೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯ ಕಠಿಣ ನಿರ್ಧಾರ ತಗೊಂಡಿರುವುದು ಹೃದಯಕ್ಕೆ ವೇದನೆಯಾಗುತ್ತಿದೆ.

ನಿನಗೂ ಗೊತ್ತಿದೆ ಈ ನಿರ್ಧಾರ ನಿನಗಷ್ಟೇ ಅಲ್ಲ, ಖಂಡಿತವಾಗಿಯೂ ಅಭಿಮಾನಿಗಳಿಗೆ ಎಂದೆಂದಿಗೂ ನಿರಾಸೆಯಾಗುತ್ತದೆ. ಯಾಕಂದ್ರೆ ನಿನ್ನ ಕಟ್ಟ ಕಡೆಯ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಅನ್ನೋ ಕೊರಗು ಕಾಡುತ್ತಿದೆ.

ಯುವ ಆಟಗಾರನಾಗಿ, ನಾಯಕನಾಗಿ, ಹಿರಿಯ ಆಟಗಾರನಾಗಿ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾಗೆ ಐತಿಹಾಸಿಕ ಜಯ ದಾಖಲಿಸಿದ್ದ ನಿನ್ನನ್ನು ಮೈದಾನದಲ್ಲಿ ಮೆರವಣಿಗೆ ಮಾಡಿ ನಿನ್ನ ಟೆಸ್ಟ್ ಕ್ರಿಕೆಟ್ ಬದುಕನ್ನು ಅರ್ಥಪೂರ್ಣಗೊಳಿಸದ ಬಿಸಿಸಿಐ ಮೆಲೆ ಸಿಟ್ಟು, ಕೋಪ ಬರುತ್ತಿದೆ. ಅದು ಕೋಚ್ ಆಗಿರಲಿ, ಬಿಸಿಸಿಐ ಆಗಿರಲಿ ಅಥವಾ ಆಯ್ಕೆ ಸಮಿತಿಯೇ ಆಗಿರಲಿ.. ಒಬ್ಬ ಮಹಾ ಕ್ರಿಕೆಟಿಗನಿಗೆ ಅಪಮಾನ ಮಾಡಿದೆ.
ಹಾಗಂತ ಬಿಸಿಸಿಐಗೆ ಇದು ಹೊಸತು ಅಲ್ಲ.. ಹಳೆಯದ್ದು ಅಲ್ಲ..ಇದು ತಪ್ಪು – ಸರಿ ಅನ್ನೋ ವಾದ ಮಾಡೋ ಸಮಯ ಕೂಡ ಅಲ್ಲ. ಭವಿಷ್ಯದ ಟೀಮ್ ಇಂಡಿಯಾದ ಹಿತದೃಷ್ಟಿಯಿಂದ ಬಿಸಿಸಿಐನ ಕೆಲವೊಂದು ನಿರ್ಧಾರಗಳನ್ನು ಅರಗಿಸಿಕೊಳ್ಳಬೇಕಾಗುತ್ತದೆ

ಅದೇನೇ ಇರಲಿ, 14 ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ರಸದೌತಣವನ್ನು ಉಣಬಡಿಸಿದ ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿ ಇನ್ನು ಮುಂದೆ ಶ್ವೇತ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕೆಂಪು ಸುಂದರಿ ಕೊಹ್ಲಿಯ ಬ್ಯಾಟ್ ಅನ್ನು ಕೂಡ ಸ್ಪರ್ಶ ಕೂಡ ಮಾಡಲ್ಲ. ರೆಡ್ ಬ್ಯೂಟಿಗೆ ವಿರಾಟ್ ಒಲ್ಲದ ಮನಸ್ಸಿನಿಂದಲೇ ಡಿವೋರ್ಸ್ ನೀಡಿದ್ದಾರೆ.

ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ಎಂದೆ ಬಿಂಬಿತವಾಗಿದ್ದ ವಿರಾಟ್ ಕೊಹ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಆ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಸಚಿನ್‍ಗಿಂತಲೂ ಮೀರಿಸುವ ಆಟವನ್ನು ಆಡಿದ್ದಾರೆ

ಅಂದ ಹಾಗೇ, ಟೆಸ್ಟ್ ಕ್ರಿಕೆಟ್ ಅಂದ್ರೆ ಅದು ಹೊಡಿಬಡಿ ಆಟವಲ್ಲ.. ಅಲ್ಲಿ ತಾಳ್ಮೆ, ಏಕಾಗ್ರತೆ, ಪರಿಶ್ರಮದ ಜೊತೆಗೆ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ. ಈ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸಿಕೊಂಡು, ತನ್ನದೇ ಶೈಲಿಯಿಂದ ಆಕ್ರಮಣಕಾರಿ ಆಟವಾಡುತ್ತಾ ವಿಶ್ವಟೆಸ್ಟ್ ಕ್ರಿಕೆಟ್‍ನಲ್ಲಿ ಚರಿತ್ರೆ ಬರೆದ ಚೀಕೂಗೆ ತುಂಬು ಹೃದಯದ ಅಭಿನಂದನೆಗಳು.. ಕೃತಜ್ಜತೆಗಳು.. ಥ್ಯಾಂಕ್ಯೂ ವಿರಾಟ್ ಕೊಹ್ಲಿ.. ಟೆಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ನೀನು ಮಾಡಿರೋ ಒಡ್ಡೋಲಗ.. ನಿನ್ನ ವಿರಾಟ ದರ್ಶನ ಎಂದೆಂದಿಗೂ ನೆನಪಿನಲ್ಲಿರುತ್ತೆ.. ಮುಂದೆ ಇದೆಯಲ್ವಾ ಏಕದಿನ ಕ್ರಿಕೆಟ್.. ಐಪಿಎಲ್..ಅಲ್ಲಿ ನಿನ್ನ ಆಟವನ್ನು ಇನ್ನಷ್ಟು ವರ್ಷಗಳ ಕಾಲ ನೋಡೋಣ..!

ಸನತ್ ರೈ

ShareTweetSendShare
Join us on:

Related Posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

by admin
July 19, 2026
0

ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?...

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

by admin
July 19, 2026
0

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ...

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

by Shwetha
July 19, 2026
0

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಈಗ ಕೇಂದ್ರ ಸರ್ಕಾರದ ಬುಡಕ್ಕೆ ಬಂದು ತಲುಪಿವೆ. ಕಳೆದ 21 ದಿನಗಳಿಂದ ದೆಹಲಿಯ...

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

by Shwetha
July 19, 2026
0

ರಾಜ್ಯದಲ್ಲಿ ಮಳೆಯ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರೈತರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಜಲಾಶಯಗಳಿಂದ ಹರಿಸಲಾಗುತ್ತಿರುವ ನೀರನ್ನು ಕೇವಲ ಕುಡಿಯುವ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram