ರೋಹಿತ್ ಗೆ ಶಾಕ್… ರಾಹುಲ್ ಪರ ಕೊಹ್ಲಿ ಬ್ಯಾಟ್
ಮುಂಬೈ : ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ ಬಳಿಕ ಟಿ-20 ನಾಯಕತ್ವದಿಂದ ಕೆಳಗಿಳಿಯೋದಾಗಿ ಘೋಷಣೆ ಮಾಡಿದ್ದಾರೆ. ಕೊಹ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆ ಟೀಂ ಇಂಡಿಯಾದ ಮುಂದಿನ ಟಿ-20 ನಾಯಕ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇದಕ್ಕೆ ಉತ್ತರ ಎಂಬಂತೆ ವಿರಾಟ್ ಬಳಿಕ ರೋಹಿತ್ ಶರ್ಮಾ ಟಿ-20 ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಕಷ್ಟು ಹಿರಿಯ ಆಟಗಾರರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಟೀಂ ಇಂಡಿಯಾದ ನಾಯಕರಾಗಿ ತಂಡವನ್ನು ಮುನ್ನಡೆಸಿರುವ ರೋಹಿತ್ ಗೆ ಟಿ-20 ನಾಯಕತ್ವ ನೀಡುವುದು ಬಹುತೇಕ ಪಕ್ಕಾ ಆಗಿದೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಬಗ್ಗೆ ಹೊಸ ಸಂಗತಿಯೊಂದು ಕ್ರಿಕೆಟ್ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ಅದೆನಂದರೇ ಕೆ.ಎಲ್ ರಾಹುಲ್ ಗೆ ಏಕದಿನದಲ್ಲಿ, ರಿಷಭ್ ಪಂತ್‍ಗೆ ಟಿ 20 ಯಲ್ಲಿ ಉಪನಾಯಕನಾಗಿ ಅವಕಾಶ ನೀಡುವಂತೆ ಕೊಹ್ಲಿ ಪಟ್ಟು ಹಿಡಿದಿದ್ದಾರಂತೆ.
ರೋಹಿತ್ ಶರ್ಮಾ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೋಹ್ಲಿ ಆಯ್ಕೆ ಸಮಿತಿಗೆ ಸೂಚನೆ ನೀಡಿದ್ದಾರಂತೆ.
ಕೇವಲ ವಿರಾಟ್ ಮಾತ್ರವಲ್ಲದೇ ಟೀಂ ಇಂಡಿಯಾದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಕೂಡ ಕೆ.ಎಲ್.ರಾಹುಲ್ ಗೆ ಉಪನಾಯಕ ಪಟ್ಟ ನೀಡಬೇಕೆಂದು ಅಭಿಪ್ರಾಯಟ್ಟಿದ್ದಾರೆ.









