Kohli | ಕೊಹ್ಲಿ ಕೆರಿಯರ್ ನಲ್ಲಿ ಇದೇ ಮೊದಲು.. ಲೈಫ್ ಲಾಂಗ್ ನೆನಪಿರುತ್ತೆ
ಆಧುನಿಕ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಕೇವಲ 28 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ನೆರವನಿಂದ ಅಜೇಯ 49 ರನ್ ಗಳಿಸಿದರು. ಇದರೊಂದಿಗೆ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡಿದ್ದಾರೆ.
ಇದರಲ್ಲಿ ವಿಶೇಷ ಏನಿದೆ ? ಮ್ಯಾಚ್ ಅಂದಮೇಲೆ ಅರ್ಧಶತಕ ಮಿಸ್ ಆಗೋದು, ಶತಕ ಮಿಸ್ ಆಗೋದು ಸಾಮಾನ್ಯ, ಆದ್ರೆ ಅದು ಸಾಮಾನ್ಯವಾಗಿ ಮಿಸ್ ಆಗಿದ್ದರೇ ಚೆನ್ನಾಗಿರುತ್ತದೆ.
ಆದ್ರೆ ತಮ್ಮ ತಪ್ಪಿನಿಂದಲೇ ಒಬ್ಬ ಬ್ಯಾಟರ್ ಸೆಂಚೂರಿ, ಅರ್ಧಶತಕ ಮಿಸ್ ಮಾಡಿಕೊಂಡರೇ ತುಂಬಾ ಬೇಸರವಾಗುತ್ತದೆ.
ಅದರಂತೆ ಇದೀಗ ವಿರಾಟ್ ಕೊಹ್ಲಿ ಶಾರ್ಟ್ ರನ್ ತಪ್ಪಿನಿಂದ ತಮ್ಮ 34ನೇ ಅರ್ಧಶತಕವನ್ನು ಮಿಸ್ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾ ಇನ್ನಿಂಗ್ಸ್ ನ 15 ನೇ ಓವರ್ ನಲ್ಲಿ ಈ ಘಟನೆ ನಡೆಯಿತು. ಆಗ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 16 ರನ್ ಗಳನ್ನು ಮಾತ್ರಗಳಿಸಿದ್ದರು.

ಸೂರ್ಯ ಕುಮಾರ್ ಯಾದವ್ 14 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಪಾರ್ನೆಲ್ ಓವರ್ ನ ಐದನೇ ಎಸೆತವನ್ನು ವಿರಾಟ್ ಸ್ಕ್ವೇರ್ ಲೆಗ್ ಕಡೆ ಆಡಿದರು. ಕೊಹ್ಲಿ – ಸೂರ್ಯ ಜೋಡಿ ಎರಡು ರನ್ ಗಳನ್ನ ಪೂರೈಸಿತ್ತು.
ಆದ್ರೆ ಅಂಪೈರ್ ಶಾರ್ಟ್ ರನ್ ಅಂತಾ ಸಿಗ್ನಲ್ ಕೊಟ್ಟರು. ಇದರೊಂದಿಗೆ ಅಚ್ಚರಿಗೊಂಡ ಕೊಹ್ಲಿ ಏನಾಯ್ತು ಅಂತಾ ಸಂದೇಹ ವ್ಯಕ್ತಪಡಿಸಿದರು.
ಮೊದಲ ರನ್ ಪೂರೈಸುವ ಕ್ರಮದಲ್ಲಿ ಕೊಹ್ಲಿ ನಾನ್ ಸ್ಟ್ರೈಕ್ ಎಂಡ್ ನಲ್ಲಿ ಬ್ಯಾಟ್ ಅನ್ನು ಕ್ರೀಸ್ ನಲ್ಲಿ ಇಟ್ಟಿಲ್ಲ ಎಂದು ರಿಪ್ಲೇನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
ರೂಲ್ಸ್ ಪ್ರಕಾರ ರನ್ ಓಡುವಾಗ ಬ್ಯಾಟ್ ಅನ್ನು ಕ್ರೀಸ್ ನ ಗೆರೆಯನ್ನು ದಾಟಿಸಬೇಕು. ಇಲ್ಲದಿದ್ದರೇ ಅದು ಶಾರ್ಟ್ ರನ್ ಆಗುತ್ತದೆ.
ಕೊಹ್ಲಿಯ ಈ ತಪ್ಪಿನಿಂದ ಅವರ ಖಾತೆಯಲ್ಲಿ ಒಂದು ರನ್ ಮೈನಸ್ ಆಯ್ತು. ಆದ್ರೆ ಅದೇ ಒಂದು ರನ್ ನಿಂದ ವಿರಾಟ್ ಕೊಹ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಇನ್ನು ಕೊನೆಗೆ ಕೊಹ್ಲಿ 28 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್ ನೊಂದಿಗೆ 49 ರನ್ ಗಳಿಸಿದರು.