2012 ಏಷ್ಯಾಕಪ್ ನಲ್ಲಿ ಪಾಕ್ ವಿರುದ್ಧ 183 ರನ್ ದಾಖಲಿಸಿರುವುದು ಕೊಹ್ಲಿಯ ಶ್ರೇಷ್ಠ ಇನಿಂಗ್ಸ್ – ಗೌತಮ್ ಗಂಭೀರ್
2012ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ತನ್ನ ವಿರಾಟ ರೂಪವನ್ನು ಪ್ರದರ್ಶಿಸಿದ್ದರು. 148 ಎಸೆತಗಳಲ್ಲಿ 183 ರನ್ ದಾಖಲಿಸಿದ್ದರು. ಗೆಲ್ಲಲು 330 ರನ್ಗಳ ಸವಾಲಿತ್ತು. ಆದ್ರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾಗಿದ್ದರು. ಕೊಹ್ಲಿಯವರ ಈ ಮಹೋನ್ನತ ಇನಿಂಗ್ಸ್ ನಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು. ಟೀಮ್ ಇಂಡಿಯಾ ಈ ಪಂದ್ಯವನ್ನು ಆರು ವಿಕೆಟ್ಗಳಿಂದ ಗೆದ್ದುಕೊಂಡಿತು.
ಎಂಟು ವರ್ಷಗಳ ಬಳಿಕ ಕೊಹ್ಲಿಯವರ ಈ ಅದ್ಭುತ ಇನಿಂಗ್ಸ್ ಅನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ನೆನಪು ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ಬದುಕಿನಲ್ಲಿ ಅನೇಕ ಮಹೋನ್ನತ ಇನಿಂಗ್ಸ್ ಗಳನ್ನು ಆಡಿದ್ದಾರೆ. ನಂಬಲು ಅಸಾಧ್ಯವಾದಂತಹ ಆಟವನ್ನು ಆಡಿದ್ದಾರೆ. ಆದ್ರೆ ನನ್ನ ಪ್ರಕಾರ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಪಾಕ್ ವಿರುದ್ಧ 183 ರನ್ ದಾಖಲಿಸಿರುವುದು ವಿರಾಟ್ ಕೊಹ್ಲಿಯ ಶ್ರೇಷ್ಠ ಇನಿಂಗ್ಸ್ ಎಂದು ಗಂಭೀರ್ ಬಣ್ಣಿಸಿದ್ದಾರೆ.
ಯಾಕಂದ್ರೆ, ಟೀಮ್ ಇಂಡಿಯಾಗೆ ಗೆಲ್ಲಲು ಬೇಕಾಗಿದ್ದು 330 ರನ್ಗಳು. ಸೊನ್ನೆ ರನ್ಗೆ ಮೊದಲ ವಿಕೆಟ್ ಪತನಗೊಂಡಿತ್ತು. ಆದ್ರೂ ಪಾಕಿಸ್ತಾನ ವಿರುದ್ಧ 183 ರನ್ ದಾಖಲಿಸಿದ್ದರು. 330 ರನ್ಗಳಲ್ಲಿ 183 ರನ್ ಕೊಹ್ಲಿಯವರದ್ದಾಗಿತ್ತು. ಇನ್ನೊಂದೆಡೆ ಪಾಕಿಸ್ತಾನ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿತ್ತು. ಮಹಮ್ಮದ್ ಹಫೀಜ್, ಉಮ್ಮರ್ ಗುಲ್, ಆಯಿಝಾಜ್ ಚೀಮಾ, ಸಯ್ಯದ್ ಅಜ್ಮಲ್ ಹಾಗೂ ಶಾಹೀದ್ ಆಫ್ರಿದಿ ಮೊದಲಾದವರಿದ್ದರು. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿಗೆ ಆಗ ಅಷ್ಟೊಂದು ಅನುಭವವೂ ಇರಲಿಲ್ಲ. ನಾನು ಮನ ಪೂರ್ವಕವಾಗಿ ಹೇಳುತ್ತಿದ್ದೇನೆ. ನಾನು ಕಂಡಂತೆ ವಿರಾಟ್ ಕೊಹ್ಲಿಯ ಶ್ರೇಷ್ಠ ಇನಿಂಗ್ಸ್ ಇದಾಗಿದೆ ಎಂದು ಗಂಭೀರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತ್ತು, ಗೌತಮ್ ಗಂಭೀರ್ ಶೂನ್ಯ ಸುತ್ತಿದ್ರು. ತೆಂಡುಲ್ಕರ್ 52 ರನ್ಗೆ ಹೋರಾಟ ಮುಗಿಸಿದ್ದರು. ನಂತರ ಕೊಹ್ಲಿ ಜೊತೆ ಸೇರಿದ ರೋಹಿತ್ ಶರ್ಮಾ 68 ರನ್ ದಾಖಲಿಸಿದ್ದರು. ಅಲ್ಲದೆ ಮೂರನೇ ವಿಕೆಟ್ಗೆ 172 ರನ್ಗಳ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಧೋನಿ ಮತ್ತು ಸುರೇಶ್ ರೈನಾ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.