Kolar | ಶೌಚಾಲಯದಲ್ಲಿ ಪುಟ್ಟ ಮಗು ಲಾಕ್
ಕೋಲಾರದ ಹಾರೋಹಳ್ಳಿಯಲ್ಲಿ ಘಟನೆ
ಅಂಗನವಾಡಿ ಶಿಕ್ಷಕಿ, ಸಹಾಯಕಿಯ ನಿರ್ಲಕ್ಷ್ಯ
ಹಾರೋಹಳ್ಳಿ ಗ್ರಾಮಸ್ಥರ ಆಕ್ರೋಶ
ಸ್ಥಳಕ್ಕೆ ಬಂಗಾರಪೇಟೆ ಸಿಡಿಪಿಓ ಭೇಟಿ
ಕೋಲಾರ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ನಿರ್ಲಕ್ಷ್ಯದಿಂದಾಗಿ ಎರಡು ಗಂಟೆಗಳ ಕಾಲ ಮಗು ಶೌಚಾಲಯದಲ್ಲಿಯೇ ಕಾಲಕಳೆದಿದ್ದು,ಅಂಗನವಾಡಿ ಸಿಬ್ಬಂದಿ ವಿರುದ್ಧ ಮಗುವಿನ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿ ಶಿಕ್ಷಕ ಹಾಗೂ ಸಹಾಯಕಿ ಎಡವಟ್ಟಿನಿಂದಾಗಿ ಗಜೇಂದ್ರ ಎಂಬ ಮಗು ಕೆಲಕಾಲ ಶೌಚಾಲಯದಲ್ಲಿಯೇ ಬಂಧಿಯಾಗಿದ್ದಾನೆ.

ಇತ್ತ ಮಗು ಮನೆಗೆ ಹೋಗದೇ ಇದ್ದಾಗ ಊರಲ್ಲೆಲ್ಲಾ ಹುಡುಕಾಟ ನಡೆಸಿ, ಅಂಗನವಾಡಿ ಬಳಿ ಬಂದಿದ್ದಾರೆ. ಈ ವೇಳೆ ಅಂಗನವಾಡಿ ಶೌಚಾಲಯದಲ್ಲಿ ಮಗು ಅಳುತ್ತಿರುವುದು ಕಂಡು ಬಂದಿದೆ.
ಬಳಿಕ ಗ್ರಾಮಸ್ಥರು ಮಗುವನ್ನು ಶೌಚಾಲಯದಿಂದ ಮಗುವನ್ನು ಹೊರಗಡೆ ಕರೆತಂದಿದ್ದಾರೆ. ಇನ್ನು ಸ್ಥಳಕ್ಕೆ ಅಂಗನವಾಡಿ ಇಲಾಖೆ ಅಧಿಕಾರಿಗಳು ಸೇರಿದಂತೆ ಬಂಗಾರಪೇಟೆ ಸಿಡಿಪಿಓ ಭೇಟಿ ನೀಡಿ ಶಿಕ್ಷಕಿ ಹಾಗೂ ಸಹಾಯಕಿಯನ್ನು ಅಮಾನತಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ.