Kolar | ಬಿಜೆಪಿ ತೆಕ್ಕೆಗೆ ಚನ್ನಸಂದ್ರ ಗ್ರಾಮ ಪಂಚಾಯಿತಿ
ಕೋಲಾರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚಿನ್ನದ ನಾಡು ಕೋಲಾರದಲ್ಲಿ ಕೇಸರಿ ಘರ್ಜನೆ ಜೋರಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇಯಾದ ಪ್ರಭಾವ ಹೊಂದಿರುವ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಅವರು ಬಿಜೆಪಿ ಸೇರಿದ್ದು, ಪಕ್ಷಕ್ಕೆ ಆನೆ ಬಲಬಂದಿದೆ.
ಕೇಸರಿ ಪಾಳಯಕ್ಕೆ ವರ್ತೂರ್ ಪ್ರಕಾಶ್ ಎಂಟ್ರಿ ಹೊಸ ಜೋಷ್ ನೀಡಿದ್ದು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಈಗಾಗಲೇ ಸಜ್ಜಾಗಿದ್ದಾರೆ.
ಈ ನಡುವೆ ತಮ್ಮ ಬಲ ಹೆಚ್ಚಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಇದೀಗ ಚನ್ನಸಂದ್ರ ಗ್ರಾಮ ಪಂಚಾಯಿತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂದಿದೆ.

ಮಂಗಳವಾರ ನಡೆದ ಚನ್ನಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಭವ್ಯ ಶ್ರೀ ಮುರಳಿ ಅವರು ಅಮೋಘ ಜಯ ಸಾಧಿಸಿದ್ದಾರೆ. 14 ಮತಗಳೊಂದಿಗೆ ಬಿಜೆಪಿಯ ಭವ್ಯಶ್ರೀ ಅವರು ದಿಗ್ವಿಜಯ ಸಾಧಿಸಿದ್ರೆ, ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಆರಕ್ಕೆ ಸೀಮಿತವಾಗಿವೆ. ಇದರೊಂದಿಗೆ ಚನ್ನಸಂದ್ರ ಗ್ರಾಮ ಪಂಚಾಯಿತಿ ಕೇಸರಿ ಪಾಳಯದ ಪಾಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್. ಬಿಜೆಪಿ ತಾ॥ಅಧ್ಯಕ್ಷರಾದ ಸಿ.ಡಿ ರಾಮಚಂದ್ರ ಗೌಡ. ಮುಖಂಡರಾದ ತಂಬಿಹಳ್ಳಿ ಮುನಿಯಪ್ಪ. ಬಂಕ್ ಮಂಜುನಾಥ್. ಗ್ರಾಮ ಪಂಚಾಯಿತಿ ಸದಸ್ಯರಾದ ಕಡಗಟ್ಟೂರು ದೇವರಾಜ್. ರಮೇಶ್, ಶೇಖರ್, ಸೊಣ್ಣೇಗೌಡ. ಪದ್ಮಮ್ಮ ನಾರಾಯಣಸ್ವಾಮಿ. ದೀಪಾ ರಾಮೇಗೌಡ, ಮುಖಂಡರಾದ ಚನ್ನಕೃಷ್ಣೇಗೌಡ, ದಿಲೀಪ್, ಮಧುಕರ್ ಎನ್ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.sa