Kolar | ಹಳೇ ದ್ವೇಷದ ಹಿನ್ನಲೆ ಎರಡು ಸಮುದಾಯಗಳ ನಡುವೆ ಗಲಾಟೆ
ಕೋಲಾರ : ಹಳೇ ದ್ವೇಷದ ಹಿನ್ನಲೆ ಎರಡು ಸಮುದಾಯದ ನಡುವೆ ಗಲಾಟೆಯಾಗಿದ್ದು, ಪೊಲೀಸರ ಎದುರೇ ಮಾರಾಮಾರಿ ನಡೆದಿದೆ.
ಕೋಲಾರ ತಾಲೂಕಿನ ದಾನವಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದಲ್ಲಿ ಹಬ್ಬದ ಸಲುವಾಗಿ ದೇವರ ಉತ್ಸವ ಮಾಡಬೇಕೆಂದು ತೀರ್ಮಾನಿಸಿದ್ದು, ಈ ಸಂಭಂದ ಹಿರಿಯರ ಸಮ್ಮುಖದಲ್ಲಿ ಮಾತನಾಡುವ ವೇಳೆ, ದಲಿತರ ಮನೆಗಳ ಬಳಿಯೂ ಉತ್ಸವ ಮೂರ್ತಿ ಮೆರವಣಿಗೆ ಬರಬೇಕೆಂದು ಗಲಾಟೆ ಶುರುವಾಗಿತ್ತು.

ಅಶೋಕ್ ಹಾಗೂ ಹರೀಶ್ ಎಂಬುವರ ನಡುವೆ ಗಲಾಟೆ ಶುರುವಾಗಿದ್ದು ಮಾರಾಮಾರಿ ಹಂತಕ್ಕೆ ತಲುಪಿತ್ತು.
ಈ ವೇಳೆ ಎರಡೂ ಸಮುದಾಯದವರು, ಇಟ್ಟಿಗೆ ಹಾಗೂ ದೊಣ್ಣದಗಳಿಂದ ಪೊಲೀಸರ ಮಧ್ಯೆಯೇ ಹೊಡೆದಾಡಿಕೊಂಡಿದ್ದು, ಎರಡೂ ಗುಂಪಿನವರಿಗೆ ಗಾಯಗಳಾಗಿವೆ..
ಘಟನೆಯಲ್ಲಿ ಹರೀಶ್, ಭವಿಷ್, ಅಶೋಕ್, ನವೀನ್, ಶಿವು, ಕೆಂಪರಾಜು, ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆ ದೂರು ಪ್ರತಿದೂರು ದಾಖಲಾಗಿದೆ.