ಕೊರೊನಾ `ನಿಯಮ ಗಾಳಿಗೆ ತೂರಿ ಲಸಿಕೆಗೆ ಕ್ಯೂ’ ನಿಂತ ಜನ

1 min read

ಕೊರೊನಾ `ನಿಯಮ ಗಾಳಿಗೆ ತೂರಿ ಲಸಿಕೆಗೆ ಕ್ಯೂ’ ನಿಂತ ಜನ

ಕೋಲಾರ : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಹೇಳುತ್ತಲೆ ಇದೆ.

ಆದ್ರೆ ಸರ್ಕಾರಿ ಕಚೇರಿಗಳಲ್ಲೇ ಇದರ ಪಾಲನೆ ಆಗುತ್ತಿಲ್ಲ. ಲಸಿಕಾ ಕೇಂದ್ರಗಳಲ್ಲೂ ಕೂಡ ಜನರು ಸಾಮಾಜಿಕ ಅಂತರ ಮರೆತು ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಇದನ್ನ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಎಸಿ ರೂಮಿನಲ್ಲಿ ತಂಪಾಗಿ ಕುಳಿತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಕೋಲಾರದ ಲಸಿಕಾ ಕೇಂದ್ರ..! ಹೌದು..! ಇಲ್ಲಿನ ಇಟಿಸಿಎಂ ಆಸ್ಪತ್ರೆ ಆವರಣದಲ್ಲಿ ವ್ಯಾಕ್ಸಿನ್ ಗಾಗಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಆದ್ರೆ ಯಾವುದೇ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ.

kolar

ಇಲ್ಲಿನ ಸ್ಥಳೀಯ ಆಡಳಿತ ಇದಕ್ಕೆ ಬಾಕ್ಸ್ ವ್ಯವಸ್ಥೆ ಕೂಡ ಮಾಡಿಲ್ಲ. ಇದರಿಂದ ಜನರು ಸಾಮಾಜಿಕ ಅಂತರ ಮರೆತು ವ್ಯಾಕ್ಸಿನ್ ಗಾಗಿ ಮುಗಿ ಬಿದ್ದಿದ್ದಾರೆ.

ಅಂದಹಾಗೆ ಈ ಮೊದಲು ಜಿಲ್ಲಾಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಆದ್ರೆ ಇಂದು ಲಸಿಕಾ ಕೇಂದ್ರವನ್ನು ಇಟಿಸಿಎಂ ಅಸ್ಪತ್ರೆಗೆ ಆರೋಗ್ಯ ಇಲಾಖೆ ಸ್ಥಾಳಾಂತರ ಮಾಡಿದ್ದು, ಯಾವುದೇ ಮುನ್ನರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಇತ್ತ ಜನರನ್ನು ನಿಯಂತ್ರಿಸಲು ಪೊಲೀಸರು ಕೂಡ ಹರಸಾಹಸಪಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd