ಕೋಲಾರ ಜಿಲ್ಲೆಯಾದ್ಯಂತ 26ರವರೆಗೂ ಕಂಪ್ಲೀಟ್ ಲಾಕ್ ಡೌನ್
ಕೋಲಾರ: ಜಿಲ್ಲೆಯಾದ್ಯಂತ ಕೊರೊನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಹುಚ್ಚು ಕುದುರೆ ಕೊರೊನಾಗೆ ಲಗಾಮು ಹಾಕಲು ಕೋಲಾರ ಜಿಲ್ಲಾಧಿಕಾರಿ ಮೇ 26ರವರೆಗೆ ಜಿಲ್ಲೆಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 21.05.2021ರ ಸಂಜೆ 6 ಗಂಟೆಯಿಂದ ದಿನಾಂಕ 26.05.2021 ರ ಸಂಜೆ 6 ತನಕ ಕೋಲಾರ ಜಿಲ್ಲೆಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಈ ಹಿನ್ನೆಲೆಯಲಿಲ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ, ಹಾಲು ಮತ್ತು ಮೆಡಿಕಲ್ ಸ್ಟೋರ್ ಗಳನ್ನು ಬಿಟ್ಟು ಯಾವುದೇ ಸೌಲಭ್ಯಗಳು ಇರುವುದಿಲ್ಲ ಎಂದು
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.