Kolar | ರಕ್ತ ಬರುವಂತೆ ಬಡಿದಾಡಿಕೊಂಡ ದಾಯಾದಿಗಳು
ಕೋಲಾರ : ಪೊಲೀಸರ ಎದುರಲ್ಲಿಯೇ ರಕ್ತ ಬರುವಂತೆ ದಾಯಾದಿಗಳು ಬಡಿದಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ವೇಣು ಎಂಬುವವರ ಮೇಲೆ ಗಂಗರಾಜ್ ಹಾಗು ಕೃಷ್ಣಪ್ಪ ಎಂಬುವವರು ಹಲ್ಲೆ ನಡೆಸಿದ್ದಾರೆ.
ಈ ಘಟನೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ.
ಮೀಸಗಾನಹಳ್ಳಿ ಗ್ರಾಮದಲ್ಲಿ ಗಂಗರಾಜ್ ಹಾಗೂ ಕೃಷ್ಣಪ್ಪ ಎನ್ನುವರ ಮಧ್ಯೆ ರಸ್ತೆ ಜಾಗದ ವಿಚಾರಕ್ಕೆ ನಿನ್ನೆ ಗಲಾಟೆ ನಡೆದಿತ್ತು.
ಈ ವೇಳೆ ಗಂಗರಾಜ್ ಗೆ, ಕಂಡಕ್ಟರ್ ವೇಣು ಬೆಂಬಲಿಸಿದ್ದರು. ಇದರಿಂದ ಕೆರಳಿ ಹಲ್ಲೆ ನಡೆಸಲಾಗಿದೆ.
ಗಲಾಟೆಯಲ್ಲಿ ಕೃಷ್ಣಪ್ಪ ತಲೆಗೆ ಗಾಯಗಳಾಗಿವೆ. ಹಲ್ಲೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಶ್ರೀನಿವಾಸಪುರ ಠಾಣಾ ಪೊಲೀಸರು ಲಾಠಿ ಚಾರ್ಜ್ ಮಾಡಿ ಎರಡೂ ಕಡೆಯವರನ್ನು ಚದುರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ನಾಲ್ಕು ಜನರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.