ತಹಶೀಲ್ದಾರ್ ಎಷ್ಟು ಮದುವೆಯಾಗಿದ್ದಾರೆ ? RTI ಮಾಹಿತಿ ಕೇಳಿದ ವ್ಯಕ್ತಿ ಅರೆಸ್ಟ್..
ಸರ್ಕಾರದ ಇಲಾಖೆಗಳಲ್ಲಿ ಪಾರದರ್ಶಕತೆಯನ್ನ ತರಲು ಸರ್ಕಾರ ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ತಂದಿದೆ. ಈ ಮೂಲಕ ಒಂದು RTI ಅರ್ಜಿ ಸಲ್ಲಿಸಿದ ಕೂಡಲೇ ಸರ್ಕಾರಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ದೊರಕಲಿವೆ.
ಆದರೇ ಇದು ಹಲವು ಬಾರಿ ದುರುಪಯೋಗ ಕೂಡ ಹಾಗಿದೆ. ಸರ್ಕಾರದ ಮಾಹಿತಿ ಕೇಳುವ ಬದಲಿಗೆ ಅಧಿಕಾರಿಯ ವೈಯಕ್ತಿಕ ಮಾಹಿತಿ ಕೇಳಿ RTI ಕಾರ್ಯಕರ್ತನೊಬ್ಬ ಜೈಲು ಪಾಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್‌ಟಿಐ ಕಾರ್ಯಕರ್ತ. ಈತ ಮುಳಬಾಗಿಲು ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರಗಳ ಮಾಹಿತಿಯನ್ನ ಆರ್‌ಟಿಐ ಅಡಿ ಕೇಳಿದ್ದ.
ಶೋಭಿತಾಗೆ ಇದುವರೆಗೂ ಎಷ್ಟು ಮದುವೆಯಾಗಿದೆ? (Marriage) ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಕೇಳಿದ್ದಾನೆ. ಅಷ್ಟೇ ಅಲ್ಲದೇ ಶೋಭಿತಾ ಅವರಿಗೆ ಎಲ್ಲಿ ಮದುವೆಯಾಗಿದೆ. ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ. ಪತಿಯ ಜೊತೆ ವಿಚ್ಛೇದನ ಆಗಿದಿಯಾ ಇಲ್ಲವಾ? ಆಗಿದ್ದರೇ ಕಾರಣ ಕೊಡಿ ಹಾಗೂ ಅವರೆಲ್ಲಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಆರ್‌ಟಿಐಗೆ ಸಲ್ಲಿಸಿದ್ದಾನೆ.
ಮಹಿಳಾ ಆಧಿಕಾರಿಯ ದೂರಿನ ಮೇರೆಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದ ಆರ್‌ಟಿಐ ಕಾರ್ಯಕರ್ತ ನಾಗರಾಜ್‍ನನ್ನು ಇದೀಗ ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kolara: How many Tahsildars are married? Person who asked for RTI information arrested..