ಚುನಾವಣಾ ರೋಡ್ ಶೋ ಎಫೆಕ್ಟ್… ಪಶ್ಚಿಮ ಬಂಗಾಳದಲ್ಲಿ 15,992 ಮಂದಿಗೆ ಪಾಸಿಟಿವ್ , 68 ಸಾವು
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಕೊರೊನಾ ಅನ್ನೋದನ್ನ ಮರೆತು ಸಾವಿರಾರು ಜನರನ್ನ ಸೇರಿಸಿಕೊಂಡು ಭರ್ಜರಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ , ಬಿಜೆಪಿ ಟಿಎಂಸಿ ಪಕ್ಷಗಳ ರಾಜಕಾರಣಿಗಳು ಬಿರುಸಿನ ಪ್ರಚಾರ ನಡೆಸಿದ್ರು. ಈ ರ್ಯಾಲಿಗಳಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಕೊರೊನಾ ನಿಯಮಗಳನ್ನೇ ಗಾಳಿಗೆ ತೂರಿದ್ದರು..
ಇದೀಗ ಇದರ ಪರಿಣಾವನ್ನೇ ಇನ್ಮುಂದೆ ಹಂತಹಂತವಾಗಿ ಅನುಭವಿಸಬೇಕೇನೋ ಅನ್ನಿಸುತ್ತಿದೆ. ಕಾರಣ ಸೋಮವಾರ ಬರೋಬ್ಬರಿ 15,992 ಮಂದಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,59,942ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 68 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 11,009 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೋಲ್ಕತ್ತಾದಲ್ಲಿಯೇ 26 ಸಾವುಗಳು ಮತ್ತು 3,868 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.








