Koppala | ಬಾವಿಗೆ ಬಿದ್ದ ಕಾರು.. ಓರ್ವ ಸಾವು
ಕೊಪ್ಪಳ : ಚಾಲಕನ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದು, ಓರ್ವ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಮೂನಹಳ್ಳಿ ಬಳಿ ನಡೆದಿದೆ.
26 ವರ್ಷದ ಸಂಗಮೇಶ ಹಿರೇಮಠ (26) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.
ಕಾರಿನಲ್ಲಿ ನಾಲ್ಕು ಜನರು ಹರಿಹರದಿಂದ ಕೊಪ್ಪಳಕ್ಕೆ ಮದುವೆಗೆ ಬರುತ್ತಿದ್ದರು.

ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ.
ಘಟನೆಯಲ್ಲಿ ಮೂವರು ಪ್ರಾಣಪಯಾದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಹಾಗೂ ಪೊಲೀಸರು, ಬಾವಿಯಿಂದ ಶವ ಹಾಗೂ ಕಾರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ.
ಈ ಸಂಬಂದ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.