ಕೊಪ್ಪಳ ಜಿಲ್ಲೆಯ ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮಳೆಯ ಅವಾಂತರಕ್ಕೆ ಜಿಲ್ಲೆಯ ಕನಕಗಿರಿ (Kanakagiri) ತಾಲೂಕಿನ ಜೀರಾಳದಲ್ಲಿ ಮನೆ ಕುಸಿದ ಪರಿಣಾಮ ವೃದ್ಧೆ ಸೇರಿದಂತೆ 20 ದಿನದ ಹಸುಗೂಸು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
60 ವರ್ಷದ ಫಕೀರಮ್ಮ(60), 20 ದಿನದ ಹೆಣ್ಣು ಮಗು ಸಾವನ್ನಪ್ಪಿರುವ ದುರ್ದೈವಿಗಳು. ಬಾಣಾಂತಿ ಕನಕಮ್ಮಳಿಗೆ ಗಾಯಗಳಾಗಿದ್ದು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕನಕಮ್ಮಳ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಎರಡೂ ದಿನಗಳ ಹಿಂದೆ ಸುರಿದ ಮಳೆಗೆ ಮನೆ ಶಿಥಿಲಗೊಂಡು ಈ ಅವಘಡ ಸಂಭವಿಸಿದೆ.








