ಸರ್ಕಾರಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲೇ ಸುಣ್ಣ, ಬಣ್ಣ

1 min read
koppala saaksha tv

ಸರ್ಕಾರಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲೇ ಸುಣ್ಣ, ಬಣ್ಣ koppala saaksha tv

ಕೊಪ್ಪಳ : `ಶಾಲೆ ನಿಮ್ಮದು, ಸೇವೆ ನಮ್ಮದು’ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳ ತಾಲೂಕಿನ ಕಲರವ ಶಿಕ್ಷಕರ ಬಳಗ ಸರ್ಕಾರಿ ಶಾಲೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಸುಣ್ಣ, ಬಣ್ಣ ಬಳಿದು ಕಾಯಕಲ್ಪ ಕಲ್ಪಿಸಿದ್ದಾರೆ. ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಶಿಕ್ಷಕರು ಮಾಡುತ್ತಿರುವ ಕೆಲಸದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಫೌಜಿಯಾ ತರುನ್ನಂ ಬಿ ಅವರು, ಶಿಕ್ಷಕರ ಬೆನ್ನು ತಟ್ಟಿ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ.

koppala saaksha tv

ಇನ್ನು ಶಿಕ್ಷಕರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ಪೂಜಾರಿ ಮೆಚ್ಚುಗೆ ವ್ಯಕ್ತಿಪಡಿಸಿದ್ದು, ನವೆಂಬರ್ ತಿಂಗಳು ಶಾಲೆಯ ಕಟ್ಟಡಕ್ಕೆ ಶಿಕ್ಷಕರು ಕನ್ನಡ ಧ್ವಜದ ಬಣ್ಣ ಬಳಿದು, ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ.

ಕಲರವ ಶಿಕ್ಷಕರ ಬಳಗ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸುಣ್ಣಬಣ್ಣ ಬಳಿಯುವ ಮೂಲಕ ಹೊಸ ಕಾರ್ಯಕಲ್ಪ ನೀಡಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ ಶಾಲೆಯ ಮುಖ್ಯೋಪಾಧ್ಯಯ ಹನುಮಂತಪ್ಪ ತಳವಾರ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd