ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಅನಾವರಣ – ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳಿಗೆ ಕೊರಗಜ್ಜನಿಂದ ಶಿಕ್ಷೆ

1 min read
Koraggajja

ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಅನಾವರಣ – ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳಿಗೆ ಕೊರಗಜ್ಜನಿಂದ ಶಿಕ್ಷೆ !

ಕರಾವಳಿ ಭೂತಾರಾಧನೆಯ ನೆಲೆವೀಡು. ದೈವಗಳ ಆರಾಧನೆಯನ್ನು ಇಲ್ಲಿನ ಜನ ಭಯ ಭಕ್ತಿಯಿಂದ ನಡೆಸುತ್ತಾರೆ. ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಕೂಡ ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.
ಕೊರಗಜ್ಜನ ಕಾಣಿಕೆ ಡಬ್ಬವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಓರ್ವ ಅನಾರೋಗ್ಯದಿಂದ ಮೃತಪಟ್ಟಿದ್ದರೆ, ಇನ್ನಿಬ್ಬರು ದೈವಸ್ಥಾನದಲ್ಲಿ ಕೊರಗಜ್ಜನ ಬಳಿ ಅಭಯಾ ನೀಡುವಂತೆ ಅಂಗಲಾಚಿದ್ದಾರೆ.
Koraggajja

ತಾಲ್ಲೂಕಿನ ವಿವಿಧೆಡೆ ದೈವಸ್ಥಾನಗಳಿಗೆ ತೆರಳಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಜೋಕಟ್ಟೆಯ ನವಾಜ್‌ ಈಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಇನ್ನಿಬ್ಬರು ಆರೋಪಿಗಳಾದ ಜೋಕಟ್ಟೆಯ ರಹೀಂ ಮತ್ತು ತೌಫಿಕ್‌ ಕೊರಗಜ್ಜ ಕೋಲೋತ್ಸವದಲ್ಲಿ ಕ್ಷಮಾಪಣೆ ಕೇಳಲು ಬಂದ ಕುತೂಹಲಕಾರಿ ಘಟನೆ ನಗರದ ಇಲ್ಲಿನ ಎಮ್ಮೆಕೆರೆ ದೈವಸ್ಥಾನದಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಇತ್ತೀಚೆಗೆ ನಗರದ ಎಮ್ಮೆಕೆರೆ ಬಬ್ಬುಸ್ವಾಮಿ ಪರಿವಾರ ದೈವಗಳ ಕ್ಷೇತ್ರ ಸೇರಿದಂತೆ ತಾಲ್ಲೂಕಿನ ಹಲವೆಡೆ ದೈವಸ್ಥಾನದ ಕಾಣಿಕೆ ಡಬ್ಬಿಗಳಿಗೆ ಅಶ್ಲೀಲ ಸೊತ್ತುಗಳನ್ನು ಹಾಕಿ ಅಪವಿತ್ರಗೊಳಿಸಲಾಗಿತ್ತು. ಒಂದು ತಿಂಗಳ ಹಿಂದೆ ಕಾಣಿಕೆ ಡಬ್ಬಿಯನ್ನು ತೆರೆದಾಗ ಈ ಕೃತ್ಯ ಬಯಲಿಗೆ ಬಂದಿತ್ತು. ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಆಘಾತಗೊಂಡ ಭಕ್ತಾದಿಗಳು ಕೊರಗಜ್ಜನಲ್ಲಿ ಬೇಡಿಕೆ ಇಟ್ಟಿದ್ದರು.

ಇದಕ್ಕೆ ಸಂಬಂಧಿಸಿದಂತೆ ದೈವಸ್ಥಾನಗಳ ಆಡಳಿತ ಮಂಡಳಿ ಪೊಲೀಸ್ ಠಾಣೆಗಳಿಗೆ ದೂರು ಕೂಡಾ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರು.

Koraggajja
ಈ ಮಧ್ಯೆ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಒಬ್ಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ತನ್ನನ್ನು ತಾನೂ ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ ನವಾಝ್ ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದಾನೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಸಮಯದಲ್ಲಿ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವ ಬಗ್ಗೆ ತೌಫಿಕ್ ಮತ್ತು ರಹೀಂ ಬಳಿ ಆತ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ನವಾಝ್ ಸಾವನ್ನಪ್ಪಿದ ಬಳಿಕ ಇತ್ತೀಚಿಗೆ ತೌಫಿಕ್ ಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಇಟ್ಟಾಗ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು.

Koraggajja

ಅದರಂತೆ ಅವರಿಬ್ಬರೂ ಕೆಲವು ದಿನಗಳ ಹಿಂದೆ ಎಮ್ಮೆಕೆರೆ ಕ್ಷೇತ್ರಕ್ಕೆ ಬಂದು ಕ್ಷಮಾಪಣೆ ಕೇಳುವುದಾಗಿ ಆಡಳಿತ ಮಂಡಳಿಯಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಕೊರಗಜ್ಜನ ನೇಮೋತ್ಸವ ದಿನದಂದು ಬರುವಂತೆ ಸೂಚಿಸಿದ್ದು, ಅದರಂತೆ ಆರೋಪಿಗಳಲ್ಲಿ ಒಬ್ಬಾತ ಬುಧವಾರ ನಡೆದ ಕೊರಗಜ್ಜ ಕೋಲಕ್ಕೆ ಬಂದು ಕ್ಷಮಾಪಣೆಗೆ ಮುಂದಾಗಿದ್ದಾನೆ. ಆದರೆ ನೇಮೋತ್ಸವದಲ್ಲಿ ಬಬ್ಬುಸ್ವಾಮಿ ಪ್ರಧಾನ ದೈವವಾದ ಕಾರಣ ಅವನ ನೇಮೋತ್ಸವದಲ್ಲೇ ಈ ಸಮಸ್ಯೆಯನ್ನು ಇಟ್ಟು ನುಡಿ ಮತ್ತು ಕ್ಷಮಾಪಣೆ ಕೇಳಿ ಎಂದು ತಿಳಿಸಲಾಯಿತು.

ಈ ನಡುವೆ ಎಮ್ಮೆಕೆರೆ ಕೊರಗಜ್ಜ ಕ್ಷೇತ್ರಕ್ಕೆ ಆರೋಪಿಗಳಲ್ಲಿ ಒಬ್ಬಾತ ಕ್ಷಮಾಪಣೆ ಕೇಳಲು ಬಂದ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೈವಸ್ಥಾನ ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

#Koraggajja #tulunadu #dhaiva #unholiness

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd