Kotak Kanya Scholarship 2022 : ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ 1.5 ಲಕ್ಷದ ವರೆಗೆ ಸ್ಕಾಲರ್‌ಶಿಪ್…
ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಸಲುವಾಗಿ ಕೋಟಕ್ ಮಹೀಂದ್ರಾ ಗ್ರೂಪ್ ಸಹಯೋಗದೊಂದಿಗೆ ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ಯೋಜನೆಯನ್ನ ಜಾರಿಗೆ ತರಲಾಗಿದೆ. ಇದನ್ನು ಕೋಟಕ್ ಎಜುಕೇಶನ್ ಫೌಂಡೇಶನ್‌ನೊಂದಿಗೆ ಮುನ್ನಡೆಸುತ್ತಿದೆ. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಪಡೆಯಲು 12 ತರಗತಿ ತೇರ್ಗಡೆಯಾಗಿರಬೇಕು.
ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2022 ರ ಅಡಿಯಲ್ಲಿ, 12 ನೇ ತರಗತಿ ಪಾಸಾದ ಎಂಜಿನಿಯರಿಂಗ್, ಎಂಬಿಬಿಎಸ್, ಆರ್ಕಿಟೆಕ್ಚರ್, ಡಿಸೈನ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಸೇರಿದಂತೆ ವೃತ್ತಪರ ಕೋರ್ಸ್ ಗಳಲ್ಲಿ ಕಲಿಕೆ ಮುಂದುವರೆಸಲ ಬಯಸುವ ವಿದ್ಯಾರ್ಥಿನಿಯರಿಗೆ ಪದವಿ ಪೂರ್ಣಗೊಳ್ಳುವವರೆಗೆ ಅವರ ಶೈಕ್ಷಣಿಕ ವೆಚ್ಚವನ್ನು ಪಾವತಿಸಲು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಅರ್ಹತೆಗಳು
ಭಾರತದಾದ್ಯಂತ ವಿದ್ಯಾರ್ಥಿನೀಯರಿಗೆ ಮುಕ್ತ ಅವಕಾಶ
ಇಂಜಿನಿಯರಿಂಗ್, ಎಂಬಿಬಿಎಸ್, ಆರ್ಕಿಟೆಕ್ಚರ್, ಡಿಸೈನ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಮುಂತಾದ ವೃತ್ತಿಪರ ಪದವಿ ಕೋರ್ಸ್‌ಗಳಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ (NAAC/NIRF ಮಾನ್ಯತೆ ಪಡೆದ) ಮೊದಲ ವರ್ಷದ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನೀಯರು.
ಅರ್ಜಿದಾರರು 12ನೇ ಬೋರ್ಡ್ ಪರೀಕ್ಷೆಗಳಲ್ಲಿ 85% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಅಥವಾ ಸಮಾನವಾದ CGPA ಅನ್ನು ಗಳಿಸಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 3,20,000 (ರೂಪಾಯಿ ಮೂರು ಲಕ್ಷ ಇಪ್ಪತ್ತು ಸಾವಿರ) ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಕೋಟಕ್ ಮಹೀಂದ್ರಾ ಗ್ರೂಪ್, ಕೋಟಕ್ ಎಜುಕೇಶನ್ ಫೌಂಡೇಶನ್ ಮತ್ತು ಬಡ್ಡಿ ಫಾರ್ ಸ್ಟಡಿ ಉದ್ಯೋಗಿಗಳ ಮಕ್ಕಳು ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2022 ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಪ್ರಯೋಜನಗಳು
ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2022 ಕ್ಕೆ ಆಯ್ಕೆಯಾದ ವಿದ್ಯಾರ್ಥಿನೀಯರಿಗೆ 1.5 ಲಕ್ಷದ ವರೆಗೆ ವಿದ್ಯಾರ್ಥಿವೇತನ ಸಿಗಲಿದೆ.
ಅರ್ಜಿ ಸಲ್ಲಿಸಲು https://kotakeducation.org/ ವೆಬ್ ಸೈಟ್ ಗೆ ಭೇಟಿ ನೀಡಿ Kotak Kanya Scholarship ಮೇಲೆ ಕ್ಲಿಕ್ ಮಾಡಿ…
Kotak Kanya Scholarship 2022 : Scholarship up to 1.5 lakhs for talented girl students…