Mekedatu padayatre | ಜನತೆಯ ಕ್ಷಮೆ ಯಾಚಿಸಿದ ಡಿಕೆಶಿ!
ಜನರಿಗೆ ಕೈ ಮುಗಿದು ಕ್ಷಮೆ ಕೋರಿದ ಡಿಕೆಶಿ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ
ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಸಂಚಾರ ದಟ್ಟಣೆ
ಸಂಚಾರ ದಟ್ಟಣೆ ಸಮಸ್ಯೆ ಹಿನ್ನೆಲೆ ಡಿಕೆಶಿ ಕ್ಷಮೆ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ರಾಜಧಾನಿ ಬೆಂಗಳೂರು ಜನರಲ್ಲಿ ಕ್ಷಮೆಯಾಚಿದ್ದಾರೆ.
ಇಂದಿನಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲಿದ್ದಾರೆ.
ಪಾದಯಾತ್ರೆ ಕಾರಣದಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ.
ಈ ಹಿನ್ನೆಲೆಯಲ್ಲಿ ಪಾದಯಾತ್ರೆಯ ನೇತೃತ್ವ ವಹಿಸಿರುವ ಡಿ.ಕೆ.ಶಿವಕುಮಾರ್ ಜನರಲ್ಲಿ ಕ್ಷಮೆ ಕೋರಿದ್ದಾರೆ.
ಅಲ್ಲದೇ ಮೂರು ದಿನದ ಟ್ರಾಫಿಕ್ ಜಾಮ್ ಸಹಿಸಿಕೊಂಡರೆ ಮುಂದಿನ 30 ವರ್ಷ ಕುಡಿಯುವ ನೀರಿಗೆ ಅನುಕೂಲವಾಗಲಿದೆ.
ಆದ್ದರಿಂದ ನಮಗೆ ಸಹಕಾರ ನೀಡಿ ಎಂದು ವಿಡಿಯೋ ಮೂಲಕ ಡಿಕೆಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಇಂದು ಕೆಂಗೇರಿಯ ಪೂರ್ಣಿಮಾ ಸಮುದಾಯಭವನದಿಂದ ಬಿಟಿಎಂ ಲೇಔಟ್ನ ಅದ್ವೈತ ಪೆಟ್ರೋಲ್ ಬಂಕ್ವರೆಗೂ ಪಾದ ಯಾತ್ರೆ ಸಾಗಲಿದೆ.
ನಾಳೆ ಅದ್ವೈತ ಪೆಟ್ರೋಲ್ ಬಂಕ್ನಿಂದ ಅರಮನೆ ಮೈದಾನದವರೆಗೆ ಪಾದಯಾತ್ರೆ ಸಾಗಲಿದೆ.
ಮೂರನೇ ಹಾಗೂ ಕಡೆಯ ದಿನ ಅರಮನೆ ಮೈದಾನದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ವರೆಗೂ ಪಾದ ಯಾತ್ರೆ ಸಾಗಲಿದೆ.kpcc president dk shivakumar asking apology to people