ಪ್ರತಿದಿನ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರ್ತಿದೆ : ಡಿ.ಕೆ.ಶಿವಕುಮಾರ್

1 min read
kpcc

ಪ್ರತಿದಿನ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರ್ತಿದೆ : ಡಿ.ಕೆ.ಶಿವಕುಮಾರ್

ತುಮಕೂರು : ಪ್ರತಿದಿನ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ 150 ಸೀಟು ಬಿಜೆಪಿಯದ್ದಲ್ಲ, ಕಾಂಗ್ರೆಸ್ ಪಕ್ಷದ್ದಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧುಗಿರಿಯಲ್ಲಿ ನಡೆದ ನೂತನ ಗ್ರಾಮಪಂಚಾಯಿತಿ ಸದಸ್ಯರುಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಂದಿನ ಬಾರಿ 150 ಸೀಟು ಪಡಿತೀವಿ ಅಂತಾರೆ. ದಿನಾ ನೀವು ಸಿನಿಮಾ ನೋಡುತ್ತಿದ್ದೀರಿ.

ದಿನಾ ಟಿವಿಯಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ. ಹಾಗಾಗಿ ಮುಂದಿನ 150 ಸೀಟು ಬಿಜೆಪಿದಲ್ಲ, ಕಾಂಗ್ರೆಸ್ ಪಕ್ಷದ್ದು ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಅಲ್ಲದೆ ಕೆಲವರು ಕುರ್ಚಿಗಾಗಿ ಗೌರವ ತರುತ್ತಾರೆ. ಇನ್ನೂ ಕೆಲವರು ಕುರ್ಚಿಗಾಗಿ ಗೌರವ ಕಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದ್ರು.

kpcc

ಇನ್ನು ಮಧುಗಿರಿಯಲ್ಲಿ ಕಾಂಗ್ರೆಸ್ ಕಟ್ಟಬೇಕು ಎಂದು ಟ್ರಬಲ್ ಶೂಟರ್, ಸಾಮಾನ್ಯ ಕಾರ್ಯಕರ್ತರು ಜೇಬಿನಿಂದ ಹಣ ಕೊಡಬೇಕು. ಕಾಂಗ್ರೆಸ್ ಕಚೇರಿ ಕಟ್ಟಲು ಹಣ ಕೊಡಬೇಕು ಇದೇ ವೇಳೆ ಮನವಿ ಮಾಡಿದರು.

ಮುಂದುವರಿದು ಬಿಜೆಪಿ ವಿರುದ್ಧ ಮುಗಿಬಿದ್ದ ಕೆಪಿಸಿಸಿ ಅಧ್ಯಕ್ಷರು, ದೇಶದಲ್ಲಿ ರೈತರು ಸಾಯುತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಯಾವತ್ತೂ ಇಂತಹ ಪ್ರತಿಭಟನೆ ನಡೆದಿಲ್ಲ. ರೈತರ ಸಂಕಷ್ಟ ಕೇಳಲು ಪ್ರಧಾನಿಗೆ ಶಕ್ತಿ, ಸೌಜನ್ಯ ಏನೂ ಇಲ್ಲ. ಇಂಥವರನ್ನ ಉಳಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd