KPTCL ಪರೀಕ್ಷಾ ಅಕ್ರಮ : ಮತ್ತೊಬ್ಬ ಅರೆಸ್ಟ್
ಬೆಳಗಾವಿ : ಗೋಕಾಕನಲ್ಲಿ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರಿನ ದೇವಸಂದ್ರ ಮೂಲದ ಮೊಹಮ್ಮದ ಅಜೀಮುದ್ದಿನ್ (37) ಬಂಧಿತ ಆರೋಪಿಯಾಗಿದ್ದಾರೆ.
ಇದರೊಂದಿಗೆ ಕೆಪಿಟಿಸಿಎಲ್ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಗೋಕಾಕ ನಗರದಲ್ಲಿ ಕಳೆದ ಆ.7ರಂದು ನಡೆದಿದ್ದ ಹೆಸ್ಕಾಂ ನೇಮಕಾತಿ ಪರೀಕ್ಷಾ ಅಕ್ರಮ ನಡೆದಿತ್ತು.
ಬಂಧಿತ ಆರೋಪಿ ವಿವಿಧ ಬಗೆಯ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನ ದೆಹಲಿ, ಹೈದರಾಬಾದ್ ದಿಂದ ತಂದು ಸಂಜು ಭಂಡಾರಿ ಸೇರಿ ಇತರರಿಗೆ ಮಾರಾಟ ಮಾಡುತ್ತಿದ್ದ.
ಆರೋಪಿಯಿಂದ ಎರಡು ಮೊಬೈಲ್ ಮತ್ತು ವಿವಿಧ ಬಗೆಯ 179 ಇಲೆಕ್ಟ್ರಾನಿಕ್ ಡಿವೈಸಗಳು, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 07 ಎನ್ 95 ಮಾಸ್ಕ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 41 ಬನಿಯನ್, ವಿವಿಧ ಬಗೆಯ 445 ಇಲೆಕ್ಟ್ರಾನಿಕ್ ಇಯರ್ ಪಿಸ್, ವಿವಿಧ ಬಗೆಯ 554 ಚಾರ್ಜಿಂಗ್ ಕೇಬಲ್, 06 ವಾಕಿಟಾಕಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.