Kranti : 28 ದಿನಗಳಿಗೆ OTT ಗೆ ಬಂದ ಡಿ ಬಾಸ್ ‘ ಕ್ರಾಂತಿ’.. ಯಾವ ಹಿಟ್ ಸಿನಿಮಾಗಳು ಎಷ್ಟು ದಿನಕ್ಕೆ ಒಟಿಟಿ ಬಂದವು..??
ನಾವೆಲ್ಲರೂ ಈಗ ಒಟಿಟಿಯ ಯುಗದಲ್ಲಿದ್ದೇವೆ ಅಂದ್ರೂ ತಪ್ಪಾಗೋದಿಲ್ಲ.. ಅದ್ರಲ್ಲೂ ಕೊರೊನಾ ಹಾವಳಿಯ ನಂತರದಿಂದ ಒಟಿಟಿ ತನ್ನ ಪ್ರಾಬಲ್ಯ ಸಾಧಿಸಿಬಿಟ್ಟಿದೆ..
ಈ ಹಿಂದೆ ಥಿಯೇಟರ್ ನಲ್ಲಿ ಒಂದು ಸಿನಿಮಾ 100 ದಿನ ಓಡಿದ್ರೆ ಸೂಪರ್ ಹಿಟ್.. ಈಗೆಲ್ಲಾ ರಿಲೀಸ್ ಆಗಿ ಕೇವಲ ಒಂದೆರೆಡು ಮೂರು ತಿಂಗಳಿಗೆ ಒಟಿಟಿಯಲ್ಲಿ ಸಿಗುತ್ತಿದೆ.. ೆಷ್ಟೋ ಸಿನಿಮಾಗಳಂತೂ ನೇರವಾಗಿ ಒಟಿಟಿಗೆ ರಿಲೀಸ್ ಆಗುತ್ತಿದೆ..
ಇನ್ನೂ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಕೂಡ ಥಿಯೇಟರ್ ನಲ್ಲಿ ರಿಲೀಸ್ ಆಗಿ ಕೇವಲ 28 ದಿನಗಳಿಗೆ ಒಟಿಟಿಗೆ ಲಗ್ಗೆ ಇಟ್ಟಿದೆ.. ಫೆಬ್ರವರಿ 23 ರಿಂದ ಅಮೆಜಾನ್ ಪ್ರೈಮ್ ನಲ್ಲಿ ಕನ್ನಡ , ತೆಲುಗು , ತಮಿಳಿ , ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.. ಹಿಂದಿ ವರ್ಷನ್ ಬಗ್ಗೆ ಸದ್ಯಕ್ಕೆ ಅಪ್ ಡೇಟ್ ಸಿಕ್ಕಿಲ್ಲ..
ಸಿನಿನಿಮಾ ಜನವರಿ 26 ಗಣರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗಿತ್ತು..
ಅಕ್ಷರ ‘ಕ್ರಾಂತಿ’ ಯ ಬಗ್ಗೆ ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿ ಗತಿ ಬಗ್ಗೆ ಅರಿವು ಮೂಡಿಸಿ ಒಂದೊಳ್ಳೆ ಸಂದೇಶ ಸಿನಿಮಾದಲ್ಲಿ ನೀಡಲಾಗಿದೆ..
ಈ ನಡುವೆ ಇತರೇ ಸಿನಿಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆಗಿ ಎಷ್ಟು ದಿನಗಳ ನಂತರ ಒಟಿಟಿಗೆ ಬಂದಿದೆ ಎಂಬ ಚರ್ಚೆಯೂ ಜೋರಾಗಿದೆ..
ಇತ್ತೀಚೆಗೆ ಅಂದ್ರೆ ಕೆಲ ತಿಂಗಳುಗಳ ನಡುವೆ ಥಿಯೇಟರ್ ನಲ್ಲಿ ರಿಲೀಸ್ ಆಗಿ ಅಬ್ಬರಿಸಿದ ಯಾವ ಸಿನಿಮಾಗಳು ಯಾವಾಗ ಒಟಿಟಿಗೆ ಬಂತು ಅನ್ನೋ ಡೀಟೇಲ್ಸ್ ಇಲ್ಲಿದೆ..
ಜೇಮ್ಸ್
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಳೆದ ವರ್ಷ ಮಾರ್ಚ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಏಪ್ರಿಲ್ 14ರಂದು ಓಟಿಟಿಗೆ ಲಗ್ಗೆ ಇಟ್ಟಿತ್ತು.
ಅಂದ್ರೆ ಥಿಯೇಟರ್ ಗಳಲ್ಲಿ ರಿಲೀಸ್ ಆದ 28 ದಿನಗಳ ನಂತರ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿತ್ತು..
ವಿಕ್ರಾಂತ್ ರೋಣ ( Vikranth Rona )
ಕಿಚ್ಚ ಸುದೀಪ್ ಅಭಿನಯ , ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾ 3ಡಿಯಲ್ಲಿ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿದೆ..
ಕಳೆದ ವರ್ಷದ ಜುಲೈ 22ರಂದು ಭರ್ಜರಿಯಾಗಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಿತ್ತು.
ಈ ಚಿತ್ರ ಸೆಪ್ಟೆಂಬರ್ 2ರಂದು ಜೀ 5ನಲ್ಲಿ ಸ್ಟ್ರೀಮ್ ಆಗಿತ್ತು. ಈ ಮೂಲಕ ಚಿತ್ರಮಂದಿರಗಳಲ್ಲಿ 37 ದಿನಗಳ ಪ್ರದರ್ಶನ ಕಂಡ ಬಳಿಕ ವಿಕ್ರಾಂತ್ ರೋಣ ಓಟಿಟಿಗೆ ಲಗ್ಗೆ ಇಟ್ಟಿತ್ತು.
ವೇದ
ಶಿವ ರಾಜ್ ಕುಮಾರ್ , ಎ ಹರ್ಷ ಕಾಂಬಿನೇಷನ್ ನ 4 ನೇ ಸಿನಿಮಾವಿದು.. ಡಿಸೆಂಬರ್ ತಿಂಗಳ 23ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಫೆಬ್ರವರಿ 10ರಿಂದ ಜೀ 5 ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಅಂದ್ರೆ ರಿಲೀಸ್ ಆಗಿ 49 ದಿನಗಳ ನಂತರ ಓಟಿಟಿಗೆ ಬಂದಿದೆ.
KGF 2
ಥಿಯೇಟರ್ ಗಳಲ್ಲಿ ಸುನಾಮಿ ಎಬ್ಬಿಸಿದ್ದ ಇಂಡಸ್ಟ್ರಿಯಲ್ ಹಿಟ್ ಸಿನಿಮಾ ಯಶ್ ನಟನೆಯ KGF 2 ಸಿನಿಮಾ ಕಳೆದ ವರ್ಷ ಏಪ್ರಿಲ್ 14 ಕ್ಕೆ ಥಿಯೇಟರ್ ಗೆ ತೂಫಾನ್ ನಂತೆ ಅಬ್ಬರಿಸಿ ಬಾಕ್ಸ್ ಆಫೀಸ್ ಶೇಕ್ ಮಾಡಿತ್ತು..
ಕಳೆದ ವರ್ಷ ಅತಿಹೆಚ್ಚು ಗಳಿಸಿದ ಭಾರತದ ಚಿತ್ರ ಎಂಬ ದಾಖಲೆ ಬರೆದ ಸಿನಿಮಾ ಕೂಡ ಇದಾಗಿದೆ..
ಜೂನ್ 3ರಂದು Ott ಗೆ ಎಂಟ್ರಿಕೊಟ್ಟಿತ್ತು.. ಈ ಮೂಲಕ ರಿಲೀಸ್ ಆದ 50 ದಿನಗಳ ನಂತರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿತ್ತು..
Kranti streaming in ott After only 28 days of theatrical release