‘ಶ್ರೀ ಕೃಷ್ಣ’ ಕನಸಿನಲ್ಲಿ ಕಾಣಿಸಿಕೊಂಡರೆ ಅರ್ಥವೇನು…? ವಿಭಿನ್ನ ರೂಪಗಳು ಏನನ್ನ ಸೂಚಿಸುತ್ತವೆ ಗೊತ್ತಾ?
ಸಾಮಾನ್ಯವಾಗಿ ನಿದ್ದೆ ಮಾಡುವಾಗ ನಾವು ಹಲವು ಕನಸುಗಳನ್ನ ಕಾಣುತ್ತೇವೆ. ಕನಸಿನಲ್ಲಿ ಅನೇಕ ವಿಷಯಗಳು ಬಂದು ಹೋಗುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ಸುಮ್ಮನೆ ಹಾಗೇ ಬರುವುದಿಲ್ಲ ಇವು ನಮ್ಮ ಮುಂದಿನ ಭವಿಷ್ಯದ ಬಗ್ಗೆ ಸಂಬಂಧ ಹೊಂದಿವೆ. ಕೆಲವು ಕನಸುಗಳು ಶುಭ ಮತ್ತು ಫಲಪ್ರದವಾಗಿದ್ದರೆ, ಕೆಲವು ಕನಸುಗಳು ಅಹಿತಕರವಾದದ್ದನ್ನು ಸೂಚಿಸುತ್ತವೆ.
ಕನಸಿನಲ್ಲಿ ನಮಗೆ ಹಲವು ಭಾರಿ ದೈವ ದರ್ಶನವೂ ಆಗುತ್ತದೆ. ಕನಸ್ಸಿನಲ್ಲಿ ದೇವತೆಗಳ ದರ್ಶನ ಮಂಗಳಕರ ಎಂದು ಪರಿಗಣಿಸಲಾಗಿದೆ. ನಿಮಗೆ ಕನಸ್ಸಿನಲ್ಲಿ ಶ್ರೀ ಕೃಷ್ಣ ಕಾಣಿಸಿದೆ ಅದು ಅತ್ಯಂತ ಶುಭ ಸಂಕೇತ. ಕನಸ್ಸಿನಲ್ಲಿ ಕಾಣುವ ಶ್ರೀಕೃಷ್ಣನ ವಿವಿಧ ರೂಪಗಳು ವಿಭಿನ್ನ ಅರ್ಥಗಳನ್ನ ಹೊಂದಿದೆ. ಸ್ವಪ್ನ ಶಾಸ್ತ್ರದ ಪ್ರಕಾರ ಅದನ್ನ ತಿಳಿಯೋಣ ಬನ್ನಿ.
ಕನಸಿನಲ್ಲಿ ಕೃಷ್ಣ ಕಂಡರೆ..
ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಕನಸ್ಸಿನಲ್ಲಿ ಶೀಕೃಷ್ಣನನ್ನ ನೋಡಿದರೆ ಆವ್ಯಕ್ತಿ ಜೀವನದಲ್ಲಿ ಸಂತೋಷ ತಟ್ಟಲಿದೆ ಎಂದರ್ಥ. ಗೋಪಿನಂದನನ ಕೃಪೆಯಿಂದ ಒಂದಾದ ಮೇಲೊಂದು ಯಶಸ್ಸು ಸಿಗಲಿದೆ.
ಕೃಷ್ಣನ ಪೂಜೆ ಮಾಡುತ್ತಿರುವುದನ್ನ ನೋಡಿದರೆ..
ಕನಸಿನಲ್ಲಿ ಶ್ರೀ ಕೃಷ್ಣನನ್ನ ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ಕನಸಿನಲ್ಲಿ ಕೃಷ್ಣನನ್ನ ಆರಾಧಿಸುತ್ತಿರುವುದನ್ನು ನೋಡಿದರೆ, ಅವನ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಅಲ್ಲದೆ, ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ವಾಸಿಯಾಗಬಹುದು.

ಶ್ರೀ ಕೃಷ್ಣನು ಬೆಣ್ಣೆ ತಿನ್ನುತ್ತಿರುವುದನ್ನು ಕಂಡರೆ…
ಸ್ವಪ್ನ ಶಾಸ್ತ್ರದ ಪ್ರಕಾರ, ತುಂಟತನದ ಗೋಪಿಲೋಲ ಬೆಣ್ಣೆಯನ್ನು ತಿನ್ನುತ್ತಿರುವುದನ್ನ ಕನಸ್ಸಿನಲ್ಲಿ ಕಂಡರೆ, ಅದನ್ನು ಧನಲಾಭದ ಸಂಕೇತವೆಂದು ಪರಿಗಣಿಸಬೇಕು. ಅಂತಹ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಹಠಾತ್ ಹಣದ ಹರಿವು ಪಡೆಯಬಹುದು.
ಕನಸಿನಲ್ಲಿ ಕೃಷ್ಣ ಹೋರಾಡುತ್ತಿರುವುದನ್ನ ನೋಡಿದರೆ..
ಕೃಷ್ಣ ಯುದ್ಧ ಮಾಡುವಾಗ ಅಥವಾ ಕೋಪಗೊಂಡ ಸ್ಥಿತಿಯಲ್ಲಿ ಕನಸಿನಲ್ಲಿ ಕಾಣಿಸಿಕೊಂಡರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುವುದಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಕೆಲವು ತೊಂದರೆಗಳು ನಿಮ್ಮ ಮೇಲೆ ಬರಬಹುದು ಎಂದರ್ಥ. ಅಂತಹ ಕನಸು ಬಂದರೆ ಮುಂಜಾನೆ ಎದ್ದು ಶ್ರೀಕೃಷ್ಣನನ್ನು ಪೂಜಿಸಿ ತೊಂದರೆ ದೂರವಾಗುವಂತೆ ಪ್ರಾರ್ಥಿಸಿ.

ರಾಧೆ ಅಥವಾ ರುಕ್ಮಿಣಿಯೊಂದಿಗೆ ಕೃಷ್ಣನನ್ನ ಕಂಡೆರೆ..
ಶ್ರೀಕೃಷ್ಣನು ಕನಸಿನಲ್ಲಿ ರಾಧೆಯೊಂದಿಗೆ ಕಾಣಿಸಿಕೊಂಡರೆ, ನಿಮ್ಮ ಪ್ರೇಮ ಜೀವನವು ಉತ್ತಮವಾಗಿರುತ್ತದೆ ಎಂದರ್ಥ. ಮತ್ತೊಂದೆಡೆ, ನೀವು ರುಕ್ಮಿಣಿಯೊಂದಿಗೆ ಕಾಣಿಸಿಕೊಂಡರೆ, ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು.
ಕೊಳಲು ನುಡಿಸುತ್ತಿರುವ ಕೃಷ್ಣನ ನೋಡಿದರೇ..
ನಿಮ್ಮ ಕನಸಿನಲ್ಲಿ ಮುರಳಿ ಮೋಹನ ಕೊಳಲು ನುಡಿಸುತ್ತಿರುವುದನ್ನು ನೋಡಿದರೆ, ಅಂತಹ ಕನಸು ಮುಂಬರುವ ಸಮಯದಲ್ಲಿ ಪ್ರಗತಿ ಮತ್ತು ವಿತ್ತೀಯ ಲಾಭವನ್ನು ಸೂಚಿಸುತ್ತದೆ.




