KRS dam ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾದ ಕೆಆರ್ ಎಸ್
ಮಂಡ್ಯ : ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ ಎಸ್ ಜಲಾಶಯ ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಿದೆ.
ಈ ವರ್ಷ ರಾಜ್ಯದಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿದೆ.
ಇದರಿಂದ ಕೆಆರ್ ಎಸ್ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಜಲಾಶಯ ಈವರೆಗೂ ಎರಡು ಬಾರಿ ಸಂಪೂರ್ಣವಾಗಿ ಭರ್ತಿಯಾಗಿದೆ.

ಇದೀಗ ಮತ್ತೆ ಭಾರಿ ಮಳೆಯಾಗಿದ್ದು, ಕೆಆರ್ ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಹೀಗಾಗಿ ಕೆಆರ್ ಎಸ್ ಜಲಾಶಯ ಈ ವರ್ಷ ಮೂರನೇ ಬಾರಿಗೆ ಭರ್ತಿಯಾಗಿದೆ.
ಈ ವರ್ಷ ಈ ಹಿಂದೆ ಜುಲೈ, ಸೆಪ್ಟೆಂಬರ್ ನಲ್ಲಿ ಕೆಆರ್ ಎಸ್ ಜಲಾಶಯ ಭರ್ತಿಯಾಗಿತ್ತು.
ಒಳಹರಿವಿನ ಪ್ರಮಾಣ 36,733 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 33,633 ಕ್ಯೂಸೆಕ್ ಇದೆ.