KRS | ಕಾವೇರಿ ನದಿ ತೀರದಲ್ಲಿ ನೆರೆ ಭೀತಿ
ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಮತ್ತೆ ಶುರುವಾಗಿದೆ. ಹೀಗಾಗಿ ಕಾವೇರಿ ನದಿ ತೀರದಲ್ಲಿ ನೆರೆ ಭೀತಿ ಹೆಚ್ಚಾಗಿದೆ.
ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ.
ಇದರಿಂದ ಕೆ ಆರ್ ಎಸ್ ಡ್ಯಾಂನಿಂದ 75,000 ರಿಂದ 1,50,000 ಲಕ್ಷ ನೀರು ಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ KRS ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.
ಡ್ಯಾಂನಿಂದ ನದಿ ನೀರು ಬಿಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಆಸ್ತಿ ಪಾಸ್ತಿ, ಜಾನುವಾರು ರಕ್ಷಣೆಗೆ ಮುಂಜಾಗೃತ ಕ್ರಮ ವಹಿಸುವಂತೆ ಸೂಚನೆ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ.
ನಿಗಮದ ಈ ಎಚ್ಚರಿಕೆಯಿಂದ ನದಿ ಪಾತ್ರದ ಆತಂಕಗೊಂಡಿದ್ದಾರೆ.
ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಟ್ರೆ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಇದೆ.
ಅಲ್ಲದೆ ನೂರಾರು ಎಕರೆ ಜಮೀನು ಜಲಾವೃತ ಸಾಧ್ಯತೆ ಇದೆ.