ಬೆಂಗಳೂರು: ತನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದು ಆತಂಕಕ್ಕೆ ಒಳಗಾಗಿದ್ದ ಕರ್ನಾಟಕ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮುಖ್ಯಪೇದೆಂಯೊಬ್ಬರು ಆಸ್ಪತ್ರೆಗೆ ಕರೆಯೊಯ್ಯುವಾಗ ಬಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಎಸ್‌ಆರ್‌ಪಿಯಲ್ಲಿ ಮುಖ್ಯಪೇದೆಗೆ ಕೊರೊನಾ ಪಾಸಿಟಿವ್ ಇದೆ ಎಂಬುದು ನಿನ್ನೆ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಅವರನ್ನು ಕೋರಮಂಗಲದ ಕೆಎಸ್‌ಆರ್‌ಪಿ ಕ್ವಾಟ್ರಸ್‌ನಿಂದ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಬಸ್‌ನಲ್ಲಿ ಚಾಲಕ ಹಾಗೂ ಸೋಂಕು ದೃಢಪಟ್ಟ ಮುಖ್ಯಪೇದೆ ಮಾತ್ರ ಇದ್ದರು. ಚಾಲಕನಿಗೆ ಗೊತ್ತೇ ಆಗದಂತೆ ತಾನು ಉಟ್ಟಿದ್ದ ಪಂಚೆಯಿAದಲೇ ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಎಸ್‌ಆರ್‌ಪಿ ಬಸ್ ಆಸ್ಪತ್ರೆ ತಲುಪಿದಾಗ ಚಾಲಕನ ಗಮನಕ್ಕೆ ಬಂದಿದೆ.
ಪೊಲೀಸರು ಪ್ರಕರಣ ದಾಖಲಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.