ಸಂಬಳ ಪರಿಷ್ಕರಿಸಿದ್ರೆ 1 ಸಾವಿರ ಕೋಟಿ ಹೊರೆಯಾಗುತ್ತೆ : ಸವದಿ
ಬೀದರ್ : ಸಾರಿಗೆ ನೌಕರರ ಮುಷ್ಕರದ ಬಗ್ಗೆ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದು, ಸಾರಿಗೆ ನೌಕರರ ಒಂದು ಬೇಡಿಕೆ ಮಾತ್ರ ಬಾಕಿ ಇದೆ.
ಅದು ಸಂಬಳ ಪರಿಷ್ಕರಣೆ. ಇದನ್ನ ಈಡೇರಿಸಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದ ಬಳಿಕ ಸಾರಿಗೆ ಇಲಾಖೆಗೆ 3 ಸಾವಿರದ ಇನ್ನೂರು ಕೋಟಿ ನಷ್ಟವಾಗಿದೆ. ಈಗ ಬರುವ ಆದಾಯದಲ್ಲಿ ಸಂಬಳಕ್ಕೆ ಮತ್ತು ಇಂಧನಕ್ಕೂ ಕೊರತೆಯಾಗುತ್ತಿದೆ.
ಈ ಹಣದ ಕೊರತೆ ನೀಗಿಸಲು ಸರ್ಕಾರದಿಂದ 1962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ. ಬೇರೆ ರಾಜ್ಯಗಳಲ್ಲಿ ಕೊರೊನಾ ನೆಪವೊಡ್ಡಿ ಸಾರಿಗೆ ನೌಕರರಿಗೆ ಸಂಬಳ ಕಟ್ ಮಾಡಲಾಗಿದೆ.
ಆದ್ರೆ ನಾವು ಆ ರೀತಿ ಮಾಡಿಲ್ಲ. ಸಾರಿಗೆ ನೌಕರರು ಒಂಭತ್ತು ಬೇಡಿಕೆಗಳನ್ನ ಇಟ್ಟಿದ್ದರು. ಅದರಲ್ಲಿ ಏಂಟು ಬೇಡಿಕೆಗಳನ್ನ ಈಡೇರಿಸಿದ್ದು, ಇನ್ನೊಂದು ಬೇಡಿಕೆ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಇನ್ನು ಸಾರಿಕೆ ನೌಕರರ ಈ ಮುಷ್ಕರದಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಹಾಗಾಗಿ ಹಠಮಾರತನ ಬಿಟ್ಟು, ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳೋಣ. ಪ್ರತಿಭಟನೆಯನ್ನು ನಿಲ್ಲಿಸಬೇಕು.
ಮೇ 4 ರ ನಂತರದ ಸಂಬಳದ ಬಗ್ಗೆ ಚೆರ್ಚೆ ಮಾಡಿ ಸಂಬಳ ಹೆಚ್ಚು ಮಾಡೋಣ ಎಂದು ಸವದಿ ಹೇಳಿದರು.
